ಬೀದರ್ ಉತ್ಸವದಲ್ಲಿ ಮೇಳೈಸಿದ ಸಂಗೀತ; ಸಂಭ್ರಮದಲ್ಲಿ ತೇಲಾಡಿದ ಜನರು - ಶಾಸಕ ರಹೀಮ್ ಖಾನ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-17442955-thumbnail-3x2-tha.jpg)
ಬೀದರ್: ಐತಿಹಾಸಿಕ ಕೋಟೆಯ ಆವರಣದಲ್ಲಿ 3 ದಿನಗಳ ಕಾಲ ಜಿಲ್ಲಾಡಳಿತ ಆಯೋಜಿಸಿರುವ ಬೀದರ್ ಉತ್ಸವ ವಿಜೃಂಭಣೆಯಿಂದ ನಡೆಯಿತು. ಕೊನೆ ದಿನವಾದ ಸೋಮವಾರ ಜನಸಾಗರವೇ ಹರಿದು ಬಂದಿತ್ತು. ಬಾಲಿವುಡ್ ಗಾಯಕ ಸುಖವಿಂದರ್ ಸಿಂಗ್, ಕನ್ನಡದ ಗಾಯಕ ವಿಜಯಪ್ರಕಾಶ್, ನಟ ಶಿವರಾಜ್ಕುಮಾರ್, ಧನಂಜಯ್, ನಟಿ ನಯನಾ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ನೆಚ್ಚಿನ ಸಿನಿಮಾ ಹಾಡುಗಳು, ಗಾಯಕರ ಕಂಠಸಿರಿ ಜನರನ್ನು ಮೋಡಿ ಮಾಡಿತು. ಕಿಡ್ಸ್ ಝೋನ್ನಲ್ಲಿ ಮಕ್ಕಳು ಎಂಜಾಯ್ ಮಾಡಿದರು. ವಿವಿಧ ಸರಕಾರಿ ಇಲಾಖೆಗಳ ಮಾಹಿತಿ ಕೇಂದ್ರಗಳು, ಸರ್ಕಾರೇತರ ಸಂಸ್ಥೆ, ಇತರೆ ಖಾಸಗಿ ಮಳಿಗೆಗಳಲ್ಲಿ ಹೆಚ್ಚಿನ ಜನಸಂದಣಿ ಇತ್ತು. ಸ್ಥಳೀಯ ಹಾಗೂ ಹೊರ ರಾಜ್ಯಗಳಿಂದ ಆಗಮಿಸಿದ ಕಲಾವಿದರು ಆಕರ್ಷಕ ಕಾರ್ಯಕ್ರಮಗಳೊಂದಿಗೆ ತಡರಾತ್ರಿವರೆಗೂ ಪ್ರೇಕ್ಷಕರನ್ನು ರಂಜಿಸಿದರು. ಮಂಗಳವಾರ ಬೆಳಗಿನವರೆಗೂ ಸುಖವಿಂದರ್ ಸಿಂಗ್ ಮತ್ತು ವಿಜಯಪ್ರಕಾಶ್ ಸಂಗೀತ ರಸದೌತಣ ನಡೆಯಿತು. ಶಾಸಕ ರಹೀಮ್ ಖಾನ್ ಸೇರಿ ಇತರೆ ಗಣ್ಯರು ಕೂಡಾ ಕುಣಿದು ಕುಪ್ಪಳಿಸಿದರು.
Last Updated : Feb 3, 2023, 8:38 PM IST