ಲೋಕಸಭೆ ಚುನಾವಣೆಗೆ ಸ್ಪರ್ಧೆ: ಪಕ್ಷದ ತೀರ್ಮಾನಕ್ಕೆ ಬದ್ಧ- ಸಂಸದ ಸಂಗಣ್ಣ ಕರಡಿ - Upcoming Lok Sabha Elections

🎬 Watch Now: Feature Video

thumbnail

By

Published : Jun 2, 2023, 2:22 PM IST

ಕೊಪ್ಪಳ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 12 ಕ್ಷೇತ್ರಗಳ ಹಾಲಿ ಬಿಜೆಪಿ ಸಂಸದರಿಗೆ ಟಿಕೆಟ್​ ತಪ್ಪುವ ಸಾಧ್ಯತೆ ಇದೆ. ಈ ವಿಚಾರದ ಕುರಿತು ಕೊಪ್ಪಳದಲ್ಲಿ ಸಂಸದ ಸಂಗಣ್ಣ ಕರಡಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ಪಕ್ಷ ತೆಗೆದುಕೊಳ್ಳುವ ತೀರ್ಮಾನಕ್ಕೆ ನಾನು ಬದ್ಧನಾಗಿದ್ದೇನೆ ಎಂದಿದ್ದಾರೆ. 

''ಪಕ್ಷದ ಹೈಕಮಾಂಡ್ ಕೊಪ್ಪಳ ಕ್ಷೇತ್ರದ ಲೋಕಸಭೆಗೆ ಟಿಕೆಟ್ ನೀಡುವ ಕುರಿತು ಏನು ತೀರ್ಮಾನ ತೆಗೆದುಕೊಳ್ಳುತ್ತದೋ ಅದನ್ನು ಸ್ವಾಗತಿಸುತ್ತೇನೆ. ಈ ಕುರಿತಂತೆ ಇದುವರೆಗೂ ಅವರು ನಮ್ಮ ಬಳಿ ಏನೂ ಚರ್ಚೆ ಮಾಡಿಲ್ಲ. ಪಕ್ಷ ಒಂದು ವೇಳೆ ಇನ್ನೊಂದು ಅವಧಿಗೆ ನೀವೇ ಸ್ಪರ್ಧಿಸಿ ಎಂದರೆ ಸ್ಪರ್ಧಿಸುವೆ, ಬೇಡ ಎಂದರೆ ಬಿಡುವೆ'' ಎಂದರು. 

''ನಿನ್ನೆ ಕೂಡ ಪಾರ್ಲಿಮೆಂಟರಿ ಸಭೆ ಕರೆದಿದ್ದರು. ಆದರೆ, ಈ ಸಭೆಯಲ್ಲಿಯೂ ಈ ಬಗ್ಗೆ ಯಾವುದೇ ರೀತಿಯ ಚರ್ಚೆಯಾಗಿಲ್ಲ. ಹೈಕಮಾಂಡ್​ ಆಲೋಚನೆ ಮಾಡಿರಬಹುದು. ನಾನು ಕೂಡ ಇಂದಿನ ಪತ್ರಿಕೆಯನ್ನು ಗಮನಿಸಿದ್ದೇನೆ. ಪಕ್ಷ ಏನೇ ತೀರ್ಮಾನ ತೆಗೆದುಕೊಂಡರೂ ನಮ್ಮ ವಿರೋಧವಿಲ್ಲ. ಪಕ್ಷ ಸ್ಪರ್ಧೆ ಮಾಡುವಂತೆ ಹೇಳಿದರೆ ಸ್ಪರ್ಧಿಸುವೆ, ಇಲ್ಲವೆಂದರೆ ಇಲ್ಲ. ನಮ್ಮದು ನಿವೃತ್ತಿಯಾಗುವ ಸಮಯ. ನಮಗೂ ರಾಜಕಾರಣದಿಂದ ರಿಲೀಫ್​ ಸಿಗುತ್ತದೆ ಎಂದು ಭಾವಿಸಿಕೊಳ್ಳುತ್ತೇವೆ. ನಾನು ಎಲ್ಲದಕ್ಕೂ ಸಿದ್ಧನಿದ್ದೇನೆ. ಟಿಕೆಟ್​ ಕೊಟ್ಟರೂ ಸರಿ, ಕೊಡದಿದ್ದರೂ ಸರಿ. ಟಿಕೆಟ್​ ನೀಡದಿದ್ದರೆ ಸಕ್ರಿಯ ರಾಜಕಾರಣದಲ್ಲಿದ್ದು ನಮ್ಮ ಕೈಯಿಂದ ಏನು ಕೆಲಸ ಮಾಡಲು ಸಾಧ್ಯವಾಗುತ್ತದೋ ಅದನ್ನು ಮಾಡುವೆ'' ಎಂದು ಹೇಳಿದರು.

ಇದನ್ನೂ ಓದಿ: 'ಷರತ್ತು'ಗಳು ಗ್ಯಾರಂಟಿ- ಸರ್ಕಾರದ ಯೋಜನೆಗಳು ನಿಯಮ, ನಿಬಂಧನೆಗಳಿಗೆ ಒಳಪಟ್ಟಿರುತ್ತವೆ: ಪ್ರಿಯಾಂಕ್ ಖರ್ಗೆ

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.