ಲೋಕಸಭೆಗೆ ಬಿಜೆಪಿ ನನ್ನನ್ನು ಬಿಟ್ಟು ಬೇರೆ ಯಾರಿಗೂ ಟಿಕೆಟ್ ಕೊಡಲ್ಲ: ರಮೇಶ ಜಿಗಜಿಣಗಿ - etv bharat kannada
🎬 Watch Now: Feature Video
Published : Aug 25, 2023, 6:07 PM IST
ವಿಜಯಪುರ: "ಲೋಕಸಭೆ ಚುನಾವಣೆಗೆ ಪಕ್ಷವು ನನ್ನನ್ನು ಬಿಟ್ಟು ಬೇರೆ ಯಾರಿಗೂ ಟಿಕೆಟ್ ಕೊಡಲ್ಲ ಎಂಬ ವಿಶ್ವಾಸವಿದೆ" ಎಂದು ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಹೇಳಿದರು. ವಿಜಯಪುರ ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಚುನಾವಣೆಗೆ ಸಿದ್ಧತೆ ಏನೂ ಇಲ್ಲ, ಪಕ್ಷ ಬಿ ಫಾರ್ಮ್ ಕೊಟ್ಟರೆ ಅಪ್ಪ, ಅಣ್ಣ ಎಂದು ಹಳ್ಳಿಗಳಲ್ಲಿ ತಿರುಗುತ್ತೇನೆ" ಎಂದರು.
ಕಳೆದ ಬಾರಿ ಬಿಜೆಪಿ ರಾಜ್ಯದಲ್ಲಿ ಗೆದ್ದಷ್ಟು ಸೀಟುಗಳನ್ನು ಈ ಬಾರಿ ಗೆಲುವುದಿಲ್ಲ ಎಂದು ಸಮೀಕ್ಷೆಗಳು ಹೇಳುತ್ತಿವೆ ಎಂಬುದಕ್ಕೆ ಪ್ರತಿಕ್ರಿಯಿಸಿ, "ಕಾಂಗ್ರೆಸ್ನವರ ಸುಳ್ಳು ಭರವಸೆಗಳಿಂದ ಜನ ದೂರವಾಗುತ್ತಿದ್ದಾರೆ. ಇವರು ಬೇಕಾದಷ್ಟು ಲಾಗ ಹೊಡೀಲಿ, ಬಿಜೆಪಿಗೆ ಈ ಬಾರಿ 25 ಸ್ಥಾನಗಳು ಬರಲಿಲ್ಲವೆಂದರೂ ಕನಿಷ್ಠ 22 ಸ್ಥಾನಗಳಾದರೂ ಬರುತ್ತವೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.
"ವಿಜಯಪುರದಲ್ಲಿ ಏರ್‌ಪೋರ್ಟ್ ಆಗಬೇಕೆಂಬುದು ನನ್ನ ಕನಸಾಗಿತ್ತು. ಅದರಂತೆ ಎರಡು ಅವಧಿಯಲ್ಲಿ ಹೆಚ್ಚಿನ ಅನುದಾನ ತಂದಿದ್ದೇನೆ. ಏರ್ರ್ಪೋರ್ಟ್ಗಿದ್ದ ಅಡ್ಡಿ ನಿವಾರಣೆ ಮಾಡಿದ್ದೇನೆ. ಈ ವಿಮಾನ ನಿಲ್ದಾಣಕ್ಕೆ ಹಲವಾರು ಬಾರಿ ಪತ್ರ ಬರೆದು ಅನುದಾನ ತಂದವನು ನಾನು. ಹೀಗಾಗಿ ಅದರ ಕ್ರೆಡಿಟ್ ನನಗೆ ಸಲ್ಲಬೇಕು, ಅದರಲ್ಲಿ ಎರಡು ಮಾತಿಲ್ಲ" ಎಂದರು.
ಇದನ್ನೂ ಓದಿ:'ಲೋಕಸಭೆಗೆ ಸ್ಪರ್ಧಿಸಲು ಅವಕಾಶ ನೀಡಬೇಕು': ಕಾಂಗ್ರೆಸ್ ಮುಖಂಡ ಅಜಯ ಕುಮಾರ ಸರನಾಯಕ