ರೀಲ್ಸ್ಗಾಗಿ ಹೆದ್ದಾರಿಯಲ್ಲಿ ಪ್ರೇಮಿಗಳ ಬೈಕ್ ಸ್ಟಂಟ್ಸ್.. ಜೋಡಿ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾದ ಪೊಲೀಸರು
🎬 Watch Now: Feature Video
ಛಿಂದ್ವಾರಾ, ಮಧ್ಯಪ್ರದೇಶ: ನಗರದಲ್ಲಿ ರೀಲ್ಸ್ ವಿಡಿಯೋಗಾಗಿ ಪ್ರೇಮಿಗಳ ಬೈಕ್ ಸ್ಟಂಟ್ಸ್ ಮಾಡಿರುವ ಘಟನೆ ಮುನ್ನೆಲೆಗೆ ಬಂದಿದೆ. ಸ್ಟಂಟ್ಸ್ ವಿಡಿಯೋದಲ್ಲಿ ಯುವತಿಯೊಬ್ಬಳು ತನ್ನ ಬಾಯ್ಫ್ರೆಂಡ್ನ ಬೈಕ್ ಹ್ಯಾಂಡಲ್ ಮೇಲೆ ಕುಳಿತುಕೊಂಡಿದ್ದು, ಈ ವೇಳೆ ಯುವಕ ಬೈಕ್ ಚಲಾಯಿಸಿದ್ದಾನೆ. ಅಷ್ಟೇ ಈ ಜೋಡಿ ರೀಲ್ಸ್ಗಾಗಿ ಅನೇಕ ರೀತಿಯ ಬೈಕ್ ಸ್ಟಂಟ್ಸ್ಗಳನ್ನು ಮಾಡಿದ್ದಾರೆ. ಇದೇ ವೇಳೆ, ಯುವಕ ತನ್ನ ಗರ್ಲ್ ಫ್ರೆಂಡ್ಗೆ ವಿಭಿನ್ನ ರೀತಿಯಲ್ಲಿ ಪ್ರಪೋಸ್ ಮಾಡಿದ್ದಾನೆ. ಪ್ರೇಮಿಗಳ ದಿನದಂದು ಈ ವಿಡಿಯೋವನ್ನು ಚಿತ್ರೀಕರಿಸಲಾಗಿದೆ ಎಂದು ಊಹಿಸಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಸಂಚಾರ ಪೊಲೀಸರಿಗೆ ಈ ವಿಷಯ ಗಮನಕ್ಕೆ ಬಂದಿದೆ.
ಪತ್ತೆ ಬಳಿ ಕ್ರಮ: ವಿಡಿಯೋ ವೈರಲ್ ಆದ ನಂತರ ಈ ರೀತಿ ರಸ್ತೆಯಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿ ಬಹಿರಂಗವಾಗಿ ಸ್ಟಂಟ್ ಮಾಡುವುದು ಅಪರಾಧದ ಅಡಿಯಲ್ಲಿ ಬರುತ್ತದೆ. ವಿಡಿಯೋದಲ್ಲಿ ಸ್ಟಂಟ್ ಮಾಡುವವರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲಾಗುವುದು ಎಂದು ಟ್ರಾಫಿಕ್ ಡಿಎಸ್ಪಿ ಸುದೇಶ್ ಸಿಂಗ್ ಹೇಳಿದ್ದಾರೆ
ನಿಯಮ ಉಲ್ಲಂಘನೆ: ಅಂಡರ್ ಬ್ರಿಡ್ಜ್ ಬಳಿ ಯುವಕ-ಯುವತಿಯರು ಸ್ಟಂಟ್ ಮಾಡುತ್ತಿರುವುದು ಕಂಡು ಬರುತ್ತಿದೆ. ಇದು ಚಿಂದ್ವಾರದಿಂದ ನಾಗಪುರಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯಾಗಿದ್ದು, ಇಲ್ಲಿ ವಾಹನಗಳ ನಿರಂತರ ಸಂಚಾರವಿರುತ್ತದೆ. ಇಂತಹ ಅಪಾಯಕಾರಿ ಸಾಹಸಗಳನ್ನು ಮಾಡುವ ಮೂಲಕ ಈ ಜೋಡಿ ತನ್ನ ಪ್ರಾಣದ ಜೊತೆಗೆ ಇತರರ ಪ್ರಾಣಕ್ಕೂ ಅಪಾಯ ತಂದೊಡ್ಡುತ್ತಿದೆ. ಸ್ಟಂಟ್ ಮಾಡುತ್ತಿರುವ ಯುವಕ ಹೆಲ್ಮೆಟ್ ಹಾಕಿಕೊಂಡಿದ್ದಾನೆ, ಆದರೆ ಆತನ ಸಹಚರರು ಹೆಲ್ಮೆಟ್ ಹಾಕಿಲ್ಲ. ಜೋಡಿಯಿಂದ ಟ್ರಾಫಿಕ್ಸ್ ನಿಯಮಗಳ ಉಲ್ಲಂಘನೆಯಾಗಿದೆ. ಈ ಜೋಡಿ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಪೊಲೀಸ್ ಅಧಿಕಾರಿ ಹೇಳಿದರು.
ಓದಿ: ಮಿಸ್ಸಿಸ್ಸಿಪ್ಪಿ ಶೂಟೌಟ್: 6 ಮಂದಿ ಬಲಿ, ಶಂಕಿತ ಪೊಲೀಸ್ ವಶಕ್ಕೆ