ಮುಂಗಾರು ಮುನಿಸು, ದುರ್ಗಾದೇವಿಯನ್ನು ಗ್ರಾಮದ ಗಡಿ ದಾಟಿಸಿ ಮಳೆಗಾಗಿ ಮೊರೆಯಿಟ್ಟ ದೇವಗಿರಿ ಜನರು - ಗಡಿ ದುರ್ಗಾದೇವಿ ಅದ್ದೂರಿ ಮೆರವಣಿಗೆ
🎬 Watch Now: Feature Video
ಹಾವೇರಿ: ಮುಂಗಾರು ಮಳೆ ಪ್ರಸ್ತುತ ವರ್ಷ ವಿಳಂಬವಾಗುತ್ತಿದೆ. ಸಾವಿರಾರು ರೂಪಾಯಿ ಖರ್ಚು ಮಾಡಿ ತಂದ ಬಿತ್ತನೆ ಬೀಜ ಗೊಬ್ಬರ ಮನೆಯಯಲ್ಲೇ ಉಳಿದಿವೆ. ಇತ್ತ ಮುಂಗಾರು ಪೂರ್ವ ಬಿತ್ತಿದ ಬೆಳೆಗಳು ಸಹ ಮೊಳಕೆಯೋಡೆದಿಲ್ಲಾ. ಮಳೆ ಆಗದ್ದರಿಂದ ರೈತ ಸಮುದಾಯದಲ್ಲಿ ಆತಂಕ ಮನೆ ಮಾಡಿದ್ದು, ವಿವಿಧೆಡೆ ಮಳೆಗಾಗಿ ಕಪ್ಪೆ ಮದುವೆ, ಕತ್ತೆ ಮದುವೆ ಮತ್ತು ಪರುವು ಸೇರಿದಂತೆ ಹಲವು ಸಂಪ್ರದಾಯ ಆಚರಿಸಿಕೊಂಡು ಬರಲಾಗುತ್ತಿದೆ.
ಇಂದು ಹಾವೇರಿ ಸಮೀಪದ ದೇವಗಿರಿ ಗ್ರಾಮಸ್ಥರು ಗ್ರಾಮದೇವಿ ಗಡಿ ದುರ್ಗಾದೇವಿಯನ್ನು ಗ್ರಾಮದ ಗಡಿ ದಾಟಿಸಿ ಮಳೆಗಾಗಿ ಪ್ರಾರ್ಥಿಸಿದ್ದಾರೆ. ದೇವಗಿರಿ ಗ್ರಾಮಸ್ಥರು ಗ್ರಾಮದಲ್ಲಿ ದೇವಿಯ ವಾರ ಬಿಟ್ಟು ಗಡಿದುರ್ಗಾದೇವಿಗೆ ವಿಶೇಷ ಪೂಜೆ, ವಿವಿಧ ನೈವೇದ್ಯ ಅರ್ಪಿಸಿದರು. ಇದೇ ಸಂದರ್ಭ ವರುಣದೇವನಿಗೂ ಬಾಳೆಹಣ್ಣ, ತೆಂಗಿನಕಾಯಿ ನೈವೇದ್ಯ ಹಿಡಿದು ಕರ್ಪೂರ ಬೆಳಗಿದರು. ನಂತರ ಗ್ರಾಮದಲ್ಲಿ ಗಡಿ ದುರ್ಗಾದೇವಿ ಅದ್ಧೂರಿ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಮೆರವಣಿಗೆಗೆ ಡೊಳ್ಳುಕುಣಿತ ಭಾಜಾ ಭಜಂತ್ರಿಗಳು ಸಾಥ್ ನೀಡಿದವು. ಗ್ರಾಮದ ಗಡಿಯವರೆಗೆ ಸಾಗಿದ ಗ್ರಾಮಸ್ಥರು ಗಡಿ ದುರ್ಗಾದೇವಿಯ ಗಡಿ ದಾಟಿಸಿ, ಮಳೆಗಾಗಿ ಪ್ರಾರ್ಥಿಸಿದರು.
ಮಳೆ ಸುರಿದಿರುವ ನಂಬಿಕೆ: ಈ ಹಿಂದೆ ಮಳೆ ಬರುವುದು ವಿಳಂಬವಾಗಿದ್ದಾಗ, ಗಡಿ ದುರ್ಗಾದೇವಿಯನ್ನು ಗ್ರಾಮದ ಗಡಿ ದಾಟಿಸುವ ಆಚರಣೆ ಮಾಡುತ್ತಿದ್ದರು. ಈ ರೀತಿ ಆಚರಣೆ ಮಾಡಿದಾಗಲೆಲ್ಲಾ ಮಳೆರಾಯ ಸುರಿದಿದ್ದಾನೆ. ಈ ವರ್ಷ ಸಹ ಈ ಆಚರಣೆಯ ನಂತರ ಮಳೆ ಬರುವ ವಿಶ್ವಾಸವನ್ನು ಗ್ರಾಮಸ್ಥರು ವ್ಯಕ್ತಪಡಿಸಿದ್ದಾರೆ.
ಇದನ್ನೂಓದಿ:ನಾಳೆ ಮಣ್ಣೆತ್ತಿನ ಅಮಾವಾಸ್ಯೆ .. ಬಸವಣ್ಣನ ಮಣ್ಣಿನ ಮೂರ್ತಿ ತಯಾರಿಸಿ ಪೂಜಿಸುವ ರೈತ ಸಮುದಾಯ