ನಮ್ಮದು ಲಿಂಗಾಯತ ಧರ್ಮ ಎಂದ ಶಾಮನೂರು ಶಿವಶಂಕರಪ್ಪ - ವಿಡಿಯೋ - etv bharat kannada

🎬 Watch Now: Feature Video

thumbnail

By ETV Bharat Karnataka Team

Published : Sep 9, 2023, 8:28 PM IST

ಶಿವಮೊಗ್ಗ: ನಮ್ಮದು ಲಿಂಗಾಯತ ಧರ್ಮ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದರು. ಶಿವಮೊಗ್ಗ ನಗರದ ಕೋಟೆ ಸೀತಾರಾಮ ಆಂಜನೇಯ ದೇವರ ದರ್ಶನ ಪಡೆದು ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸನಾತನ ಧರ್ಮದ ಕುರಿತು ನಡೆಯುತ್ತಿರುವ ಚರ್ಚೆಗಳ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಹೇ ಬೇಡಪ್ಪ ನಮಗೆ ಯಾವ ಧರ್ಮ, ನಮ್ಮದು ಲಿಂಗಾಯತ ಧರ್ಮ ಎಂದರು.

ಇನ್ನು ಮೀಸಲಾತಿಗಾಗಿ ಬಳ್ಳಾರಿಯಲ್ಲಿ ಸಮಾವೇಶ ಮಾಡುತ್ತಿರುವ ವಿಚಾರವಾಗಿ ಮಾತನಾಡಿದ ಅವರು, ಬಳ್ಳಾರಿಯಲ್ಲಿ ನಡೆಯುತ್ತಿರುವುದು ಸಮಾವೇಶ ಅಲ್ಲ, ಹಿರಿಯರಿಗೆ ಸನ್ಮಾನ ಮಾಡುವ ಕಾರ್ಯಕ್ರಮ. ಮೀಸಲಾತಿಗಾಗಿ ಬೇಡಿಕೆ ಮೊದಲಿನಿಂದಲೂ ಇದೆ. ಒಬಿಸಿ ಮೀಸಲಾತಿ ಕೊಡಿ ಎಂದು ಸರ್ಕಾರಕ್ಕೆ ಕೇಳುತ್ತೇವೆ ಎಂದರು. ಇನ್ನು ಜೆಡಿಎಸ್ ಜೊತೆ ಬಿಜೆಪಿ ಮೈತ್ರಿ ಮಾಡಿಕೊಳ್ಳುತ್ತಿರುವ ವಿಚಾರ ಮಾತನಾಡಿದ ಅವರು, ಅದರ ಬಗ್ಗೆ ತಲೆಕೆಡಿಸಿಕೊಳ್ಳಬೇಕಾದ ಅವಶ್ಯಕತೆ ಇಲ್ಲ ಎಂದು ಹೇಳಿದರು. ಇನ್ನು ಇಂಡಿಯಾ ಎಂದು ಬದಲಾಯಿಸಿ ಭಾರತ ಎಂದು ಮರುನಾಮಕರಣ ಮಾಡುವ ಬಗ್ಗೆ ನಡೆಯುತ್ತಿರುವ ಚರ್ಚೆಯ ಬಗ್ಗೆ ಪ್ರತಿಕ್ರಿಯಿಸಿ, ಇಂಡಿಯಾ ಭಾರತ ಎನ್ನುವುದು ವೀರಶೈವ, ಲಿಂಗಾಯಿತ ಎಂದು ಹೇಗೆ ಹೇಳುತ್ತೆವೆಯೋ ಹಾಗೆ ಎಂದರು. ಈ ವೇಳೆ ಕೆಪಿಸಿಸಿ ಕಾರ್ಯದರ್ಶಿ ಹೆಚ್,ಸಿ ಯೋಗೀಶ್, ಕಾಂಗ್ರೆಸ್ ಮುಖಂಡರಾದ ಎಸ್.ಪಿ ದಿನೇಶ್ ಹಾಗೂ ನಾಗರಾಜ್, ಜಿಲ್ಲೆಯ ಕಾಂಗ್ರೆಸ್​ ಮುಖಂಡರು ಉಪಸ್ಥಿತರಿದ್ದರು.

ಇದನ್ನೂ ಓದಿ: BSY ಕಡೆಗಣಿಸಿದಾಗಲೆಲ್ಲ ಬಿಜೆಪಿಗೆ ಹಾನಿ : ರೇಣುಕಾಚಾರ್ಯ... ಜೆಡಿಎಸ್​ ಮೈತ್ರಿ ವಿಚಾರ ಇನ್ನೂ ಪ್ರಿ ಮೆಚ್ಯೂರ್​​ ಎಂದ ಸೋಮಣ್ಣ!

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.