ETV Bharat / state

ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ನಮ್ಮ ಹಠವಲ್ಲ, ರಿಕ್ವೆಸ್ಟ್ ಮಾತ್ರ: ಸಚಿವ ಸತೀಶ್ ಜಾರಕಿಹೊಳಿ - KARNATAKA CONGRESS

ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಿಸಲು ನಮ್ಮದೇನು‌ ಹಠವಿಲ್ಲ. ಹೈಕಮಾಂಡ್​ಗೆ ರಿಕ್ವೆಸ್ಟ್ ಮಾಡಿದ್ದೇವೆ. ಅಂತಿಮವಾಗಿ ಹೈಕಮಾಂಡ್ ತೀರ್ಮಾನಿಸುತ್ತದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಸಚಿವ ಸತೀಶ್ ಜಾರಕಿಹೊಳಿ, Minister Satish Jarakiholi
ಸಚಿವ ಸತೀಶ್ ಜಾರಕಿಹೊಳಿ (ETV Bharat)
author img

By ETV Bharat Karnataka Team

Published : Feb 18, 2025, 7:01 PM IST

ಮಂಗಳೂರು: ಡಿ.ಕೆ.ಶಿವಕುಮಾರ್ ಅವರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವ ಬಗ್ಗೆ ನಮ್ಮದೇನು‌ ಹಠ ಇಲ್ಲ. ಹೈಕಮಾಂಡ್​ಗೆ ರಿಕ್ವೆಸ್ಟ್ ಮಾತ್ರ ಮಾಡಿದ್ದೇನೆ. ಮುಂದಿನ ನಿರ್ಧಾರ ವರಿಷ್ಠರಿಗೆ ಬಿಟ್ಟದ್ದು ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಕುರಿತು ಮಂಗಳೂರಿನಲ್ಲಿ ಮಾತನಾಡಿದ ಅವರು, ನಾವು ಹೋಗಿ ಹೈಕಮಾಂಡ್‌ಗೆ ಪ್ರಾರ್ಥನೆ ಮಾಡುವುದು‌ ಮಾತ್ರ. ಹೈಕಮಾಂಡ್ ಬಳಿ ಹೇಳಲು ನಮ್ಮ ಪಕ್ಷದಲ್ಲಿ ಎಲ್ಲರೂ ಸ್ವತಂತ್ರರಿದ್ದಾರೆ. ಅಂತಿಮವಾಗಿ ಈ ಬಗ್ಗೆ ಪಕ್ಷದ ವರಿಷ್ಠರು ನಿರ್ಧಾರ ಮಾಡುತ್ತಾರೆ ಎಂದು ಪ್ರತಿಕ್ರಿಯೆ ನೀಡಿದರು.

ಸಚಿವ ಸತೀಶ್ ಜಾರಕಿಹೊಳಿ (ETV Bharat)

ದಲಿತ ಸಮಾವೇಶದ ವಿಚಾರದಲ್ಲಿ ಮಾತನಾಡಿದ ಅವರು, ಸದ್ಯಕ್ಕೆ ದಲಿತ ಸಮಾವೇಶ ಇಲ್ಲವೇ ಇಲ್ಲ. ಈ ಬಗ್ಗೆ ಖಚಿತವಾಗಿ ಹೇಳುತ್ತೇನೆ. ಅದು ಗೃಹ ಸಚಿವರ ನೇತೃತ್ವದಲ್ಲಿ ನಡೆಯುವ ಸಮಾವೇಶ. ಅವರು ಯಾವಾಗ ಹೇಳುತ್ತಾರೋ ಆಗ ಸಮಾವೇಶ ನಡೆಯುತ್ತದೆ ಎಂದರು.

ಗೃಹ ಸಚಿವ ಡಾ.ಜಿ.ಪರಮೇಶ್ವರ್ ದೆಹಲಿ ಭೇಟಿ ವಿಚಾರವಾಗಿ ಮಾತನಾಡಿ, ದೆಹಲಿ ಹೈಕಮಾಂಡ್ ಎಂದರೆ ದೇವಸ್ಥಾನ ಇದ್ದ ಹಾಗೆ. ಅಲ್ಲಿಗೆ ಯಾರು ಬೇಕಿದ್ರೂ ಹೋಗಬಹುದು, ಯಾರು ಹೋಗೋದಕ್ಕೂ ನಿರ್ಬಂಧವಿಲ್ಲ. ನಾನು ಹೋದಾಗ ಪಕ್ಷ ಬೆಳೆಯಬೇಕು. ಮತ್ತೆ ಅಧಿಕಾರಕ್ಕೆ ಬರಬೇಕು ಅನ್ನೋದನ್ನು ಹೈಕಮಾಂಡ್ ಬಳಿ ಬೇಡಿಕೊಂಡಿದ್ದೇನೆ. ಎಲ್ಲರೂ ಹೋಗಿ‌ ಅದನ್ನೇ ಬೇಡೋದು. ಸಣ್ಣಪುಟ್ಟ ವ್ಯತ್ಯಾಸಗಳು‌ ಇದ್ದರೆ ಅದನ್ನ ಸರಿ ಮಾಡೋ ಪ್ರಾರ್ಥನೆ‌ ಕೂಡಾ ಅಲ್ಲೇ ಆಗುತ್ತದೆ ಎಂದು ತಿಳಿಸಿದರು.

ಗೃಹಲಕ್ಷ್ಮಿ ಹಣ ಬಿಡುಗಡೆಯಾಗದ ವಿಚಾರವಾಗಿ ಸತೀಶ್ ಜಾರಕಿಹೊಳಿ ಮಾತನಾಡಿ, ಎರಡು ತಿಂಗಳಿನಿಂದ ಗೃಹಲಕ್ಷ್ಮಿ ಹಣ ಬಿಡುಗಡೆಯಾಗಿಲ್ಲ. ಈಗ ಒಟ್ಟಿಗೇ ಬಿಡುಗಡೆ ಆಗುತ್ತದೆ. ಈ ಹಿಂದೆಯೂ ಎರಡು ತಿಂಗಳಿಗೊಮ್ಮೆ ಬಿಡುಗಡೆ ಆಗುತ್ತಾ ಬಂದಿದೆ. ಒಟ್ಟಾರೆ ಹಣ ಕೂಡಿಸಿ ಕೊಡುತ್ತಿದ್ದೇವೆ, ಯೋಜನೆ ನಿಲ್ಲಿಸಿಲ್ಲ. ತಾತ್ಕಾಲಿಕ ತಡವಾಗಿದೆ, ಪೂರ್ತಿ ಕೊಡುವ ಪ್ರಯತ್ನ ಮಾಡ್ತೇವೆ ಎಂದು ಹೇಳಿದರು.

ಇನ್ನು ಇದೇ ವೇಳೆ ಸಿಎಂ ಸ್ಥಾನ ನೀಡಿದರೆ ಸ್ವೀಕರಿಸುತ್ತೀರಾ ಎಂಬ ಪ್ರಶ್ನೆಗೆ ಉತ್ನರಿಸಿದ ಅವರು, ಸಿಎಂ ಸ್ಥಾನ ಕೊಡುವ ಪ್ರಶ್ನೆ ಇಲ್ಲ. ಅ ಸ್ಥಾನ ಸಿಗುವುದು ಅಷ್ಟು ಸುಲಭ ಇಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದರು.

ಇದನ್ನೂ ಓದಿ: ಡಿ.ಕೆ.ಶಿವಕುಮಾರ್ ಎಐಸಿಸಿ ಹೆಸರು ದುರ್ಬಳಕೆ ಮಾಡುವುದು ಬೇಡ : ಸಚಿವ ಕೆ.ಎನ್. ರಾಜಣ್ಣ

ಇದನ್ನೂ ಓದಿ: 'ಸಿದ್ದರಾಮಯ್ಯ ನಮ್ಮ ನಾಯಕ, ಸ್ಥಳೀಯ ಮಟ್ಟದಿಂದ ಲೋಕಸಭಾ ಚುನಾವಣೆವರೆಗೂ ಅವರು ಬೇಕು'

ETV Bharat Logo

Copyright © 2025 Ushodaya Enterprises Pvt. Ltd., All Rights Reserved.