ತೀರ್ಥಹಳ್ಳಿ ತಾಲೂಕು ಕಚೇರಿಗೆ ಶಾಸಕ ಆರಗ ಜ್ಞಾನೇಂದ್ರ ದಿಢೀರ್ ಭೇಟಿ: ಖಾಲಿ ಚೇರ್ ಕಂಡು ಗರಂ - ಈಟಿವಿ ಭಾರತ್ ಕನ್ನಡ ನ್ಯೂಸ್
🎬 Watch Now: Feature Video
ಶಿವಮೊಗ್ಗ : ಸೋಮವಾರ ಮಧ್ಯಾಹ್ನ ತೀರ್ಥಹಳ್ಳಿ ತಾಲೂಕು ಕಚೇರಿಗೆ ಶಾಸಕ ಆರಗ ಜ್ಞಾನೇಂದ್ರ ದಿಢೀರ್ ಭೇಟಿ ನೀಡಿ ಅಧಿಕಾರಿಗಳಿಗೆ ಶಾಕ್ ಕೊಟ್ಟರು. ಕೆಲಸದ ಅವಧಿಗೂ ಮುನ್ನವೇ ಅಧಿಕಾರಿಗಳು ಕಚೇರಿಯಿಂದ ಹೋಗಿರುವುದನ್ನು ಕಂಡ ಶಾಸಕರು ಫುಲ್ ಗರಂ ಆದರು. ತಮ್ಮ ಕೆಲಸ ಕಾರ್ಯಗಳಿಗೆ ಬಂದಿದ್ದ ಸಾರ್ವಜನಿಕರು ಖಾಲಿ ಚೇರುಗಳಿಗೆ ಹಿಡಿಶಾಪ ಹಾಕುವಾಗಲೇ ಶಾಸಕರು ಎಂಟ್ರಿ ಕೊಟ್ಟಿದ್ದು, ಅಧಿಕಾರಿಗಳು ದಿಕ್ಕು ದೋಚದಂತೆ ನಿಂತಿದ್ದರು.
ನಂತರ ಕಚೇರಿಯ ರಿಜಿಸ್ಟರ್ ತೆರೆಯಿಸಿ ಸಿಬ್ಬಂದಿಗಳನ್ನು ಪರಿಶೀಲಿಸಿದ ಶಾಸಕರು ಕಚೇರಿಯಲ್ಲಿ ಶೇ 50 ಕ್ಕಿಂತಲು ಕಡಿಮೆ ಸಿಬ್ಬಂದಿಗಳು ಇರುವುದನ್ನು ಕಂಡು ಬೇಸರ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕರ ಕೆಲಸ ಮಾಡಿಕೊಡಬೇಕಾದ ಅಧಿಕಾರಿಗಳು ತಮ್ಮ ಕೆಲಸವ ಅವಧಿ ಮುಗಿಯುವ ಮೊದಲೇ ಚೇರ್ ಬಿಟ್ಟು ಜಾಗ ಖಾಲಿ ಮಾಡಿದರೆ ಹೇಗೆ ಎಂದು ಮೇಲಾಧಿಕಾರಿಗಳನ್ನು ಪ್ರಶ್ನಿಸಿದರು. ಕಚೇರಿಯಲ್ಲಿ ಇರುವ ಸಿಬ್ಬಂದಿಗಳ ಕೊರತೆಯ ಬಗ್ಗೆಯೂ ಮಾಹಿತಿ ಪಡೆದುಕೊಂಡ ಶಾಸಕರು, ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತನಾಡುವುದಾಗಿ ತಿಳಿಸಿದರು. ಸೋಮವಾರ ರಜೆ ಮೇಲೆ ಇರದೆ, ಅವಧಿಗೂ ಮುನ್ನ ತೆರಳಿದ ಸಿಬ್ಬಂದಿಗಳ ಕುರಿತು ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದರು.
ಇದನ್ನೂ ಓದಿ : ಮೈಸೂರಲ್ಲಿ ಸಿಎಂ ನೂತನ ಮನೆ ನಿರ್ಮಾಣ.. ಕಟ್ಟಡ ಕಾರ್ಯ ವೀಕ್ಷಿಸಿದ ಸಿದ್ದರಾಮಯ್ಯ