ತೋಟಕ್ಕೆ ಭೇಟಿ ನೀಡಿದ ಶಾಸಕಿ ಅಂಜಲಿ ನಿಂಬಾಳ್ಕರ್: ರೈತರಿಂದ ಗೆಣಸು ಬೆಳೆಯ ಬಗ್ಗೆ ಮಾಹಿತಿ ಸಂಗ್ರಹ - ರೈತರಿಂದ ಗೆಣಸು ಬೆಳೆಯ ಬಗ್ಗೆ ಮಾಹಿತಿ
🎬 Watch Now: Feature Video
ಬೆಳಗಾವಿ: ಖಾನಾಪುರ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್ ಗೆಣಸು ಬೆಳೆದ ರೈತರ ತೋಟಕ್ಕೆ ಭೇಟಿ ನೀಡಿ ರೈತ ಮಹಿಳೆಯರೊಂದಿಗೆ ಬೆಳೆಯ ಬಗ್ಗೆ ಮಾಹಿತಿ ಪಡೆದುಕೊಂಡರು. ಖಾನಾಪುರದಿಂದ ಬೆಳಗಾವಿ ನಗರಕ್ಕೆ ಆಗಮಿಸುವ ಮಾರ್ಗ ಮಧ್ಯದಲ್ಲಿ ಹೊಲದಲ್ಲಿ ರೈತರು ಕೆಲಸದಲ್ಲಿ ನಿರತರಾಗಿದ್ದರು. ಅವರನ್ನು ನೋಡಿ ತೋಟಕ್ಕೆ ಭೇಟಿ ನೀಡಿದರು. ಖಾನಾಪುರ ಭಾಗದಲ್ಲಿ ಹೆಚ್ಚಾಗಿ ಕೆಂಪು ಗೆಣಸು ಬೆಳೆಯುತ್ತಾರೆ. ಈ ಕುರಿತು ಮಾರ್ಕೆಟ್, ಬೆಳೆ ಯಾವ ರೀತಿ ಬೆಳೆಯುತ್ತಾರೆ ಹಾಗೂ ಆದಾಯದ ಬಗ್ಗೆ ಶಾಸಕಿ ರೈತರಿಂದ ಮಾಹಿತಿ ಪಡೆದುಕೊಂಡರು.
Last Updated : Feb 14, 2023, 11:34 AM IST