'ಕೆಲಸ ಸರಿಯಾಗಿ ಮಾಡು ಇಲ್ಲವೆಂದರೆ ನನ್ನ ಕ್ಷೇತ್ರ ಬಿಟ್ಟು ಹೋಗು': ಅಧಿಕಾರಿಗಳಿಗೆ ಶಾಸಕ ಎ.ಮಂಜು ತರಾಟೆ - A manju warned government officials
🎬 Watch Now: Feature Video
ಹಾಸನ: ಜಿಲ್ಲೆಯ ಅರಕಲಗೂಡು ತಾಲೂಕಿನ ಪಟ್ಟಣ ಪಂಚಾಯಿತಿ ಅಧಿಕಾರಿಗೆ ಶಾಸಕ ಎ.ಮಂಜು ರಸ್ತೆ ವಿಸ್ತರಣೆ ವಿಚಾರವಾಗಿ ಏಕವಚನದಲ್ಲಿಯೇ ತರಾಟೆ ತೆಗೆದುಕೊಂಡಿರುವ ಘಟನೆ ನಡೆದಿದೆ. ಇಂದು ನಡೆದ ಪಟ್ಟಣ ಪಂಚಾಯಿತಿಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡಿದ್ದರು.
ರಸ್ತೆ ಕಾಮಗಾರಿ ಅರ್ಧಕ್ಕೆ ನಿಂತಿದ್ದು ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ದೂರು ಸ್ವೀಕರಿಸಿದ ಶಾಸಕರು ಇಂದು ಸಭೆಯಲ್ಲಿ ಕಾಮಗಾರಿಗೆ ಸಂಬಂಧಿಸಿದ ಅಧಿಕಾರಿಗೆ "ಕೆಲಸ ಸರಿಯಾಗಿ ಮಾಡು ಇಲ್ಲಾಂದ್ರೆ ನನ್ನ ಕ್ಷೇತ್ರ ಬಿಟ್ಟು ಹೋಗು" ಎಂದು ಹೇಳುವ ಮೂಲಕ ಅಧಿಕಾರಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಅರಕಲಗೂಡು ಶಾಸಕರಾದ ಬಳಿಕ ಎ. ಮಂಜು, ಫುಲ್ ಆಕ್ಟೀವ್ ಆಗಿದ್ದು, ಕ್ಷೇತ್ರದ ಅಭಿವೃದ್ಧಿ ಕಡೆ ಹೆಚ್ಚಿನ ಗಮನ ಹರಿಸುತ್ತಿದ್ದಾರೆ.
ಇನ್ನು ರಾಜ್ಯದಲ್ಲಿ ಮಳೆಗಾಲ ಪ್ರಾರಂಭವಾಗಲು ಕೆಲವೇ ದಿನಗಳು ಬಾಕಿ ಉಳಿದಿದ್ದು, ಕ್ಷೇತ್ರದಲ್ಲಿ ಮಳೆಯಿಂದಾಗಿ ಅತಿವೃಷ್ಟಿ ಮತ್ತು ಅನಾವೃಷ್ಟಿ ಆಗುವ ಸಂಭವ ಇರುವುದರಿಂದ ಅಧಿಕಾರಿಗಳ ಸಭೆ ಕರೆದು ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು ಎಂದು ಸರ್ಕಾರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದನ್ನೂ ಓದಿ: 'ವಿಮಾನ ಉಲ್ಟಾ ಹಾರಾಡಿ ಬ್ಲಾಸ್ಟ್ ಆಯ್ತು' : ಪ್ರತ್ಯಕ್ಷದರ್ಶಿಗಳ ಮಾತು