ವಿಶ್ವವಿಖ್ಯಾತ ಅಲಂಗನಲ್ಲೂರು ಜಲ್ಲಿಕಟ್ಟಿಗೆ ಉದಯನಿಧಿ ಸ್ಟಾಲಿನ್ರಿಂದ ಚಾಲನೆ: ವಿಡಿಯೋ
🎬 Watch Now: Feature Video
Published : Jan 17, 2024, 4:34 PM IST
ಅಲಂಗನಲ್ಲೂರು (ತಮಿಳುನಾಡು): ವಿಶ್ವವಿಖ್ಯಾತ ಅಲಂಗನಲ್ಲೂರು ಜಲ್ಲಿಕಟ್ಟು (ಗೂಳಿ ಪಳಗಿಸುವ ಕ್ರೀಡೆ)ಗೆ ಇಂದು ಬೆಳಗ್ಗೆ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್ ಚಾಲನೆ ನೀಡಿದರು. ಒಟ್ಟು 1,200 ಗೂಳಿಗಳು ಮತ್ತು 800 ಗೂಳಿ ಪಳಗಿಸುವವರು ಜಲ್ಲಿಕಟ್ಟು ಕಾರ್ಯಕ್ರಮಕ್ಕೆ ನೋಂದಣಿ ಮಾಡಿಕೊಂಡಿದ್ದಾರೆ. ಜಲ್ಲಿಕಟ್ಟು ಒಟ್ಟು 10 ಸುತ್ತುಗಳಲ್ಲಿ ನಡೆಯಲಿದೆ. ಪ್ರತಿ ಸುತ್ತಿನಲ್ಲಿ 50 ಆಟಗಾರರು ಸ್ಪರ್ಧಿಸಲಿದ್ದಾರೆ. ಹೆಚ್ಚು ಗೂಳಿಗಳನ್ನು ಹಿಡಿಯುವ ಆಟಗಾರ ಮುಂದಿನ ಸುತ್ತಿಗೆ ಅರ್ಹತೆ ಪಡೆಯುತ್ತಾನೆ. ಚಿನ್ನದ ನಾಣ್ಯಗಳು, ಬೈಕ್ಗಳನ್ನು ವಿಜೇತ ಗೂಳಿ ಮಾಲೀಕರಿಗೆ ಮತ್ತು ಗೂಳಿ ಹಿಡಿದವರಿಗೆ ನೀಡಲಾಗುತ್ತದೆ.
ಸಚಿವ ಉದಯನಿಧಿ ಸ್ಟಾಲಿನ್ ಅವರು, ಹೆಚ್ಚು ಗೂಳಿಗಳನ್ನು ಹಿಡಿಯುವ ಸ್ಪರ್ಧಿಗೆ 8 ಲಕ್ಷ ಮೌಲ್ಯದ ಕಾರು ಮತ್ತು ಒಂದೂವರೆ ಲಕ್ಷ ಮೌಲ್ಯದ ಬೈಕ್ ಮತ್ತು ಜಲ್ಲಿಕಟ್ಟಿನಲ್ಲಿ ಉತ್ತಮ ಪ್ರದರ್ಶನ ನೀಡುವ ಗೂಳಿಯ ಮಾಲೀಕರಿಗೆ 8 ಲಕ್ಷ ರೂ.ಗಳ ಕಾರು ಮತ್ತು ಬೈಕ್ ಅನ್ನು ಬಹುಮಾನವಾಗಿ ನೀಡಲಿದ್ದಾರೆ. ಸ್ಪರ್ಧೆ ನಡೆಯುವ ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು 2000ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. 5 ಸುತ್ತುಗಳು ಮುಗಿಯವಷ್ಟರಲ್ಲಿ ಒಟ್ಟು 39 ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಮಧುರೈನ ಪ್ರಸಿದ್ಧ ಅವನಿಯಪುರಂ ಜಲ್ಲಿಕಟ್ಟು ಆರಂಭ: ಸಾವಿರ ಗೂಳಿಗಳ ಜೊತೆ 600 ಜನರ ಸೆಣಸು-ವಿಡಿಯೋ