ನಿರಂತರ ಮಳೆಯಿಂದ ಮುಳುಗಡೆಯಾದ ಕಂಬಾರಗಣವಿ ಗ್ರಾಮ ಸೇತುವೆ.. ಸಚಿವ ಸಂತೋಷ್ ಲಾಡ್ ಭೇಟಿ, ಪರಿಶೀಲನೆ - ಧಾರವಾಡ ನ್ಯೂಸ್
🎬 Watch Now: Feature Video
ಧಾರವಾಡ: ಜಿಲ್ಲೆಯ ಅಳ್ನಾವರ ತಾಲೂಕಿನ ಕಂಬಾರಗಣವಿ ಗ್ರಾಮದ ಸೇತುವೆಗೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಇಂದು ಭೇಟಿ ನೀಡಿದ್ದರು. ಕಳೆದ ಮೂರು ದಿನಗಳ ಹಿಂದೆ ನಿರಂತರ ಮಳೆಗೆ ಸೇತುವೆ ಮುಳುಗಡೆಯಾಗಿತ್ತು. ಸೇತುವೆ ಪರಿಶೀಲನೆ ಮಾಡಿದ ಸಚಿವರು ಸ್ಥಳೀಯ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಬ್ರಿಡ್ಜ್ ನಿರ್ಮಾಣ ಕಾಮಗಾರಿ ಕುರಿತು ಚರ್ಚಿಸಿದರು. ಬಳಿಕ ಸೇತುವೆ ಮೇಲೆ ಸ್ಥಳೀಯರ ಜೊತೆ ನಿಂತುಕೊಂಡು ವೀಕ್ಷಿಸಿದರು.
ಪ್ರತಿ ಬಾರಿ ಮಳೆ ಬಂದಾಗ ಮುಳುಗಡೆಯಾಗುವ ಸೇತುವೆ ಇದಾಗಿದೆ. ಕಳೆದ 5 ದಿನಗಳಿಂದ ಜಿಲ್ಲೆಯಲ್ಲಿ ಭಾರಿ ಮಳೆ ಹಿನ್ನೆಲೆ ತುಂಬಿ ಹರಿಯುತ್ತಿದೆ. ಈ ಹಿನ್ನೆಲೆ ಗ್ರಾಮದ ರಸ್ತೆ ಕಡಿತವಾಗಿತ್ತು. ಶಾಲೆ ಮಕ್ಕಳನ್ನ ಜೆಸಿಬಿ ಬಳಸಿ ಗ್ರಾಮಸ್ಥರು ಸೇತುವೆ ದಾಟಿಸಿದ್ದರು. ಈ ಹಿನ್ನೆಲೆ ಸಚಿವರು ಭೇಟಿ ನೀಡಿದ್ದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು "ಮಳೆ ಬಂದಾಗ ಸೇತುವೆ ಮುಳುಗಡೆಯಾಗುತ್ತದೆ. ಸೇತುವೆ ಟೆಂಡರ್ ಆಗಿದೆ. ಮಳೆ ಕಡಿಮೆಯಾದ ಮೇಲೆ ಸೇತುವೆ ಕಾರ್ಯ ಆರಂಭವಾಗುತ್ತದೆ. 1.5 ಕೋಟಿ ಹಣ ಕೂಡ ಬಿಡುಗಡೆಯಾಗಿದೆ" ಎಂದರು. ಹಲವು ಕಡೆ ರಸ್ತೆ ಸಮಸ್ಯೆ ಇದೆ. ಅರಣ್ಯದ ಕ್ಲಿಯರೆನ್ಸ್ ಸಿಗ್ತಿಲ್ಲ. ಹೀಗಾಗಿ ಅರಣ್ಯ ಇಲಾಖೆ ಜತೆ ಸಭೆ ಮಾಡಿ ಇತ್ಯರ್ಥ ಮಾಡುತ್ತೇವೆ. ಅಧಿಕಾರಿಗಳಿಗೆ ಮಳೆ, ಕಾಮಗಾರಿ ಬಗ್ಗೆ ಹೇಳಿದ್ದೇನೆ. ಸರ್ಕಾರದ ವತಿಯಿಂದ ಆಗಬೇಕಾದ ಕೆಲಸ ಮಾಡಲಾಗುವುದು. ಅರಣ್ಯ ಇಲಾಖೆಯಲ್ಲಿ ಇರುವ ಗ್ರಾಮಗಳ ಸಮಸ್ಯೆ ಈಗಲೂ ಇದೆ. ಮಳೆಯಿಂದ ಮನೆ ಬಿದ್ದವರಿಗೆ ಮನೆ ಪರಿಹಾರ ಕೊಡುವ ಕೆಲಸ ಕೂಡ ಮಾಡುತ್ತೇವೆ. ಶಾಲೆಗಳ ದುರಸ್ತಿ ಕೂಡ ಆಗಲಿದೆ. ಮಳೆ ಕಡಿಮೆ ಆದ ತಕ್ಷಣ ಅಂಗನವಾಡಿ ಸೇರಿ ಎಲ್ಲ ಶಾಲೆ ದುರಸ್ತಿ ಮಾಡಲಾಗುವುದು. ಈ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಕೊಡಲು ಹೇಳಿದ್ದೇನೆ ಎಂದರು.
ತುಂಬಿದ ಸೇತುವೆ ಮೇಲೆ ಸಚಿವರ ಪ್ರಯಾಣ: ಕಂಬಾರಗಣವಿ ಹಳ್ಳದ ವೀಕ್ಷಣೆಗೆ ಬಂದಿದ್ದ ಸಚಿವ ಸಂತೋಷ್ ಗ್ರಾಮ ವೀಕ್ಷಣೆ ಮಾಡಲು ಮೊದಲು ಸೇತುವೆ ಮೇಲೆ ನೀರಿಲ್ಲದ ಕಾರಣ ಕಾರಿನಲ್ಲಿ ಗ್ರಾಮಕ್ಕೆ ಪ್ರಯಾಣ ಮಾಡಿದ್ದರು. ನಂತರ ಮರಳಿ ಬರುವಾಗ ಸೇತುವೆ ಮೇಲೆ ನೀರು ಬಂದ ಹಿನ್ನೆಲೆ ಸ್ಚಲ್ಪ ಸಮಯ ಅಲ್ಲಿಯೇ ಕಾದಿದ್ದಾರೆ. ಬಳಿಕ ನೀರು ತುಂಬಿದ ಸೇತುವೆ ಮೇಲೆ ಕಾರಿನಲ್ಲಿ ಪ್ರಯಾಣಿಸಿದರು.
ಇದನ್ನೂ ಓದಿ: ಧಾರವಾಡ ಜಿಲ್ಲೆಯಲ್ಲಿ ಮಳೆ ಅಬ್ಬರ: ಕೇಂದ್ರ ಸ್ಥಾನದಲ್ಲಿರಲು ಅಧಿಕಾರಿಗಳಿಗೆ ಡಿಸಿ ಸೂಚನೆ