ಧಾರವಾಡ: ಬ್ಯುಸಿ ಕೆಲಸಗಳ ನಡುವೆ ಕ್ರಿಕೆಟ್ ಆಡಿದ ಸಚಿವ ಸಂತೋಷ್ ಲಾಡ್ - ಮಕ್ಕಳ ಕ್ರೀಡಾ ಭವಿಷ್ಯ
🎬 Watch Now: Feature Video
Published : Aug 28, 2023, 4:17 PM IST
ಧಾರವಾಡ: ಆರೋಗ್ಯದ ಕುರಿತು ಸದಾ ಕಾಳಜಿ ವಹಿಸುವ ಸಚಿವ ಸಂತೋಷ ಲಾಡ್ ಪ್ರತಿನಿತ್ಯ ವಾಕಿಂಗ್ ಮಾಡುತ್ತಾರೆ. ಇಂದು ಸಹ ಧಾರವಾಡ ಕರ್ನಾಟಕ ಕಲಾ ಮಹಾವಿದ್ಯಾಲಯದ ಮೈದಾನದಲ್ಲಿ ಜಾಗಿಂಗ್ ಮಾಡುವ ವೇಳೆ ಯುವಕರೊಂದಿಗೆ ಕ್ರಿಕೆಟ್ ಆಡಿ ರಿಲ್ಯಾಕ್ಸ್ ಆಗಿದ್ದಾರೆ.
ತಮ್ಮ ಕೆಲಸದ ಒತ್ತಡದ ಮಧ್ಯೆಯೂ ಸ್ವಲ್ಪ ಹೊತ್ತು ಯುವಕರೊಂದಿಗೆ ಕ್ರಿಕೆಟ್ ಆಡಿದರು. ಕ್ರಿಕೆಟ್ ಆಟದ ವಿವಿಧ ಶಾಟ್ಗಳನ್ನು ಬಾರಿಸಿದ ಲಾಡ್ ಯುವಕರೊಂದಿಗೆ ಚಪ್ಪಾಳೆ ಗಿಟ್ಟಿಸಿಕೊಂಡರು. ಸ್ವೀಪ್ ಶಾಟ್, ಕವರ್ ಡ್ರೈವ್, ಸೇರಿದಂತೆ ಹಲವು ಬಗೆಯ ಶಾಟ್ ಹೊಡೆದರು.
ಇದನ್ನೂ ಓದಿ: ಶಿಥಿಲಗೊಂಡ ಕಾಲೇಜಿನಲ್ಲಿ ಪಾಠ: ಕಾಲೇಜಿಗೆ ಲಾಡ್ ಭೇಟಿ, ಪರಿಶೀಲನೆ.. ಬೇರೆ ಕಡೆ ತರಗತಿ ನಡೆಸಲು ಸೂಚನೆ
ಕಾರ್ಮಿಕ ಸಚಿವರಾಗಿ ಸರ್ಕಾರದ ಹಲವಾರು ಜವಾಬ್ದಾರಿ ಕೆಲಸಗಳ ನಡುವೆ ಬಿಡುವು ಮಾಡಿಕೊಂಡು ಯುವ ಪ್ರತಿಭೆಗಳ ಜೊತೆ ಕ್ರಿಕೆಟ್ ಆಡಿದ್ದು ಬಹಳ ಖುಷಿ ನೀಡಿತು ಎಂದಿದ್ದಾರೆ. ಅಲ್ಲದೇ, ಈ ಎಲ್ಲ ಮಕ್ಕಳ ಕ್ರೀಡಾ ಭವಿಷ್ಯಕ್ಕೆ ಸಚಿವ ಲಾಡ್ ಶುಭ ಹಾರೈಸಿದ್ದಾರೆ.
ಇದನ್ನೂ ಓದಿ: ಜಾಗಿಂಗ್ನಲ್ಲಿ ರೈತನ ಮೇವಿನ ಗಾಡಿ ತಳ್ಳಿ ಸಹಾಯ ಮಾಡಿದ ಸಂತೋಷ್ ಲಾಡ್: ಸಾರ್ವಜನಿಕರಿಂದ ಮೆಚ್ಚುಗೆ