ಹೈಗಮ್ ರಖ್ ಜೌಗು ಪ್ರದೇಶಕ್ಕೆ ಆಗಮಿಸುತ್ತಿರುವ ವಲಸೆ ಪಕ್ಷಿಗಳು - nine wetlands in Kashmir

🎬 Watch Now: Feature Video

thumbnail

By

Published : Dec 2, 2022, 4:45 PM IST

Updated : Feb 3, 2023, 8:34 PM IST

ಸೋಪೋರೆ(ಜಮ್ಮು ಮತ್ತು ಕಾಶ್ಮೀರ): ವಲಸೆ ಹಕ್ಕಿಗಳು ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಸೋಪೋರೆ ಪ್ರದೇಶದಲ್ಲಿರುವ ಹೈಗಮ್ ರಖ್ ಜೌಗು ಪ್ರದೇಶಕ್ಕೆ ಆಗಮಿಸಲು ಪ್ರಾರಂಭಿಸಿವೆ. ಚಳಿಗಾಲದ ಪ್ರಾರಂಭದಲ್ಲೇ ಪಕ್ಷಿಗಳು ಈ ಜಲಮೂಲಕ್ಕೆ ಕಾಲಿಡುತ್ತಿವೆ. ಹೆಚ್ಚಾಗಿ ಇಲ್ಲಿಗೆ ಆಗಮಿಸುವ ಪಕ್ಷಿಗಳೆಂದರೆ ಮಲ್ಲಾರ್ಡ್ಸ್, ಗ್ರೇಲಾಗ್ ಹೆಬ್ಬಾತುಗಳು, ಪೊಚಾರ್ಡ್ಸ್, ಕಾಮನ್ ಟೈಲ್ಸ್, ಶೊವೆಲ್ಲರ್ಸ್, ಪಿನ್‌ಟೇಲ್ಸ್ ಮತ್ತು ಘರ್ವಾಲ್‌ಗಳು ನವೆಂಬರ್​ನಿಂದ ಮಾರ್ಚ್​ ನಡುವೆ ಭೇಟಿ ನೀಡುತ್ತವೆ. ಕೆಲವೊಮ್ಮೆ ಪಕ್ಷಿಗಳು ಡಿಸೆಂಬರ್ ಅಂತ್ಯದ ವೇಳೆ ಅತೀ ಹೆಚ್ಚು ಸಂಖ್ಯೆಯಲ್ಲಿ ಆಗಮಿಸುತ್ತವಂತೆ. ಯುರೋಪ್, ಮಧ್ಯ ಏಷ್ಯಾ, ಚೀನಾ, ಜಪಾನ್​ನಿಂದ ಪಕ್ಷಿಗಳು ಇಲ್ಲಿಗೆ ವಲಸೆ ಬರುತ್ತವೆ.
Last Updated : Feb 3, 2023, 8:34 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.