ಭಾರಿ ಮಳೆಗೆ ಮುಂಬೈ ತಲ್ಲಣ.. ತಗ್ಗು ಪ್ರದೇಶಗಳು ಜಲಾವೃತ, ಸಂಚಾರ ಅಸ್ತವ್ಯಸ್ತ - ಮುಂಬಯಿ ಮಹಾನಗರ ಪಾಲಿಕೆ
🎬 Watch Now: Feature Video
ಮುಂಬೈ(ಮಹಾರಾಷ್ಟ್ರ): ನಾಲ್ಕು ದಿನಗಳಿಂದ ಮುಂಬೈ ನಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು,ಜನಜೀವನ ಅಸ್ತವ್ಯಸ್ತಗೊಂಡಿದೆ. ಶುಕ್ರವಾರವೂ ಭಾರೀ ಮಳೆ ಸುರಿದಿದೆ.
ತಗ್ಗು ಪ್ರದೇಶಗಳು ಜಲಾವೃತ: ಘಾಟ್‌ಕೋಪರ್, ಚೆಂಬೂರ್, ಭಾಂಡೂಪ್, ಮುಲುಂಡ್, ಕುರ್ಲಾ, ಸಿಯಾನ್, ವಡಾಲಾ, ಬಾಂದ್ರಾ ಸೇರಿದಂತೆ ವಿವಿಧೆಡೆ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಮುಂದಿನ 24 ಗಂಟೆಗಳಲ್ಲಿಯೂ ಅಪಾರ ಮಳೆ ಬೀಳುವ ಸಂಭವ ಇದೆ ಎನ್ನುವುದನ್ನು ಹವಾಮಾನ ಇಲಾಖೆ ಈಗಾಗಲೇ ಮುನ್ಸೂಚನೆ ನೀಡಿದ್ದು, ಮುಂಬೈ ಮಹಾನಗರ ಪಾಲಿಕೆಯ ತುರ್ತು ವಿಭಾಗವೂ ನಿಗಾ ವಹಿಸಿದೆ.
ಸಂಚಾರ ವಿಳಂಬ: ನಿರಂತರ ಸುರಿದ ಮಳೆಗೆ ಮಹಾನಗರಿಯ ಜನಜೀವನ ಅಸ್ತವ್ಯಸ್ತಗೊಂಡಿದೆ. ಕುರ್ಲಾ, ಚೆಂಬೂರ್, ಪರಾಲ್, ದಾದರ್, ಬಾಂದ್ರಾ, ಸಿಎಸ್‌ಟಿ, ಬೈಕುಲ್ಲಾ, ಸಿಯಾನ್, ಚುನಾಭಟ್ಟಿ ಮುಂತಾದೆಡೆ ಸತತ ಎರಡು ಗಂಟೆಗಳ ಕಾಲ ಮಳೆ ಸುರಿದಿದೆ. ಇದರಿಂದ ಕೆಲವು ಗಂಟೆ ಕಾಲ ರಸ್ತೆ ಸಂಚಾರಕ್ಕೆ ಅಡೆತಡೆಯಾಯಿತು. ರೈಲು ಸಂಚಾರದ ಮೇಲೆ ಸ್ವಲ್ಪ ಪರಿಣಾಮ ಬೀರಿದ್ದರಿಂದ ವೇಳಾಪಟ್ಟಿಯಲ್ಲಿಯೂ ಏರುಪೇರು ಆಗಿದೆ.
ವಿವಿಧ ಪ್ರದೇಶಗಳಲ್ಲಿ ನುಗ್ಗಿದ ನೀರು: ಬೆಳಗ್ಗೆ ಕೆಲಸಕ್ಕೆ ತೆರಳುವ ಜನರಿಗೆ ವಾಹನಗಗಳು ಸಮಯಕ್ಕೆ ಸರಿಯಾಗಿ ಬಾರದೇ ಇದ್ದಿದ್ದರಿಂದ ತೊಂದರೆ ಅನುಭವಿಸಬೇಕಾಯಿತು. ಹೀಗಾಗಿ ತಮ್ಮ ಆಫೀಸ್ಗೆ ತಲುಪಲು, ಸೇವಕರು ಬಹಳ ದೂರ ನಡೆದುಕೊಂಡು ಹೋಗಬೇಕಾಯಿತು. ವಿಪರೀತ ಮಳೆಗೆ ತಗ್ಗು ಪ್ರದೇಶಗಳಾದ ಘಾಟ್‌ಕೋಪರ್, ಕುರ್ಲಾ, ಮುಲುಂಡ್, ಚೆಂಬೂರ್, ಬಾಂದ್ರಾ, ಸಿಯಾನ್, ವಡಾಲಾ, ಅಂಧೇರಿ, ಬೊರಿವಲಿ, ಮನ್‌ಖುರ್ದ್, ಪರಾಲ್, ದಾದರ್ ಮತ್ತಿತರ ತಗ್ಗಿನ ಪ್ರದೇಶಗಳಲ್ಲಿ ನೀರು ನುಗ್ಗಿ ಜನರಲ್ಲಿ ಆತಂಕ ಸೃಷ್ಟಿಸಿತು.
ಮಿಲನ್ ಸುರಂಗಮಾರ್ಗ, ಅಂಧೇರಿ ಸುರಂಗಮಾರ್ಗದಲ್ಲಿ ಬಹಳ ನೀರು ಸಂಗ್ರಹಗೊಂಡಿದ್ದ ಹಿನ್ನೆಲೆ ಸಂಚಾರ ಮಾರ್ಗ ಬದಲಾಯಿಸಲಾಯಿತು. ಗುರುವಾರ ರಾತ್ರಿ 8 ರಿಂದ ಬೆಳಗ್ಗೆ 8ರ ವರೆಗೆ ನಗರದಲ್ಲಿ 53.54 ನಿಮಿಷದ ವರೆಗೆ ಧಾರಾಕಾರ ಮಳೆ ಸುರಿದಿದೆ. ಪೂರ್ವ ಉಪನಗರಗಳಲ್ಲಿ 25.06 ಮಿಲಿ ಮೀಟರ್ ಮತ್ತು ಪಶ್ಚಿಮ ಉಪನಗರಗಳಲ್ಲಿ 26.23 ಮಿಮೀ ಮಳೆ ಬಿದ್ದಿರುವುದು ದಾಖಲಾಗಿದೆ.
ಇದನ್ನೂಓದಿ:Chandrayaan 3 mission: ಯಶಸ್ವಿಯಾಗಿ ನಭಕ್ಕೆ ಜಿಗಿದ ಬಾಹುಬಲಿ.. ಚಂದ್ರನತ್ತ ಪ್ರಯಾಣ ಶುರು ಎಂದ ಇಸ್ರೋ