ಸತಾರ: ರಿಪೇರಿ ಅಂಗಡಿಯಲ್ಲಿ ಮೊಬೈಲ್ ಬ್ಯಾಟರಿ ಸ್ಫೋಟ.. ಮಾಲೀಕರಿಗೆ ಸಣ್ಣ ಪುಟ್ಟ ಗಾಯ - MH Battery explodes
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/640-480-18544026-thumbnail-16x9-sanjuu.jpg)
ಸತಾರ (ಮಹಾರಾಷ್ಟ್ರ): ಊದಿಕೊಂಡಿದ್ದ ಮೊಬೈಲ್ ಬ್ಯಾಟರಿ ಬದಲಾಯಿಸಲು ರಿಪೇರಿ ಅಂಗಡಿ ಮಾಲೀಕರು ಮುಂದಾದಾಗ ಬ್ಯಾಟರಿ ಸ್ಪೋಟಗೊಂಡ ಘಟನೆ ತಾಲೂಕಿನ ಕರಾದ್ ತಾಲೂಕಿನ ಉಂಡಾಳೆ ಗ್ರಾಮದ ಮೊಬೈಲ್ ರಿಪೇರಿ ಅಂಗಡಿಯಲ್ಲಿ ನಡೆದಿದೆ.
ಹಳೆಯ ಬ್ಯಾಟರಿಯನ್ನು ಸರಿಪಡಿಸುವಾಗ ಸ್ಪೋಟ: ನಿನ್ನೆ ಸಂಜೆ ಈ ಘಟನೆ ನಡೆದಿದೆ. ಘಟನೆಯಲ್ಲಿ ಗ್ರಾಹಕ ಹಾಗೂ ಅಂಗಡಿಯವರಿಗೆ ಸಣ್ಣಪುಟ್ಟ ಸುಟ್ಟ ಗಾಯಗಳಾಗಿದ್ದು, ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಈಗ ಬೆಳಕಿಗೆ ಬಂದಿವೆ. ಗ್ರಾಹಕರು ಮೊಬೈಲ್ ಫೋನ್‌ನಿಂದ ತೆಗೆದ ಹಳೆಯ ಬ್ಯಾಟರಿಯನ್ನು ಸರಿಪಡಿಸಲು ಮುಂದಾದಾಗ ಬ್ಯಾಟರಿ ಸ್ಫೋಟಗೊಂಡಿದೆ ಎಂದು ಅಂಗಡಿಯ ಮಾಲೀಕ ಸಚಿನ್ ಭಾವ್ಕೆ ತಿಳಿಸಿದ್ದಾರೆ.
ಇದನ್ನೂ ಓದಿ: ಹೋಮ್ ಥಿಯೇಟರ್ ಸ್ಫೋಟ.. ನವವಿವಾಹಿತ ಸಾವು - ಆರು ಜನರಿಗೆ ಗಾಯ
ಬ್ಯಾಟರಿ ಬದಲಾಯಿಸಬೇಕು: ಅಲ್ಲದೇ ಮೊಬೈಲ್ ಫೋನ್ ಬ್ಯಾಟರಿ ಊದಿಕೊಂಡರೆ ಮುಂಜಾಗ್ರತಾ ಕ್ರಮವಾಗಿ ಮೊಬೈಲ್ ಫೋನ್ ರಿಪೇರಿ ತಂತ್ರಜ್ಞರು ಮೊಬೈಲ್ ಫೋನ್ ಹತ್ತಿರ ಇಟ್ಟುಕೊಳ್ಳಬಾರದು ಅಥವಾ ಚಾರ್ಜ್ ಕೂಡಾ ಮಾಡಬಾರದು. ಕೂಡಲೇ ಬ್ಯಾಟರಿ ಬದಲಾಯಿಸಬೇಕು ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ವಿಡಿಯೋ ನೋಡುತ್ತಿದ್ದಾಗ ಮೊಬೈಲ್ ಸ್ಫೋಟ: ಬಾಲಕಿ ದಾರುಣ ಸಾವು