ಡೀಸೆಲ್ ತೆಗೆದು ಮಾರಾಟ ಮಾಡಲು ಮುಂದಾದ ಚಾಲಕ.. ನೋಡು -ನೋಡುತ್ತಲೇ ಧಗಧಗನೇ ಹೊತ್ತಿ ಉರಿದ ಗ್ಯಾಸ್ ಟ್ಯಾಂಕರ್! - ಜೋಧಪುರದಲ್ಲಿ ಧಗಧಗನೇ ಹೊತ್ತಿ ಉರಿದ ಗ್ಯಾಸ್ ಟ್ಯಾಂಕರ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-15643029-thumbnail-3x2-efesd.jpg)
ಗುರುವಾರ ರಾತ್ರಿ ರಾಜಸ್ಥಾನದ ಜೋಧಪುರದ ಪಾಲಿ ರಸ್ತೆಯಲ್ಲಿ ಮೀಥೇನ್ ಗ್ಯಾಸ್ ತುಂಬಿದ್ದ ಟ್ಯಾಂಕರ್‌ಗೆ ಹಠಾತ್ ಆಗಿ ಬೆಂಕಿ ಕಾಣಿಸಿಕೊಂಡು ಧಗಧಗನೇ ಹೊತ್ತಿ ಉರಿದ ಘಟನೆ ಕಂಡು ಬಂದಿದೆ. ಇದರಿಂದ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಈ ಘಟನೆಯ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದರು. ಟ್ಯಾಂಕರ್ ಪಾಣಿಪತ್ ರಿಫೈನರಿಯಿಂದ ಗುಜರಾತ್‌ಗೆ ಹೋಗುತ್ತಿತ್ತು. ಟ್ಯಾಂಕರ್ ಚಾಲಕ ಶ್ಯಾಮ್ ಸಿಟಿಸಿ ಹೋಟೆಲ್ ಹೊರಗೆ ಡೀಸೆಲ್ ತೆಗೆದಿದ್ದಾರೆ. ಈ ವೇಳೆ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡಿದೆ. ಟೈರ್ ಮೇಲೆ ಡೀಸೆಲ್ ಹರಡಿದಾಗ ಟೈರ್ ಉರಿಯಲಾರಂಭಿಸಿದ್ದು, ಅದನ್ನು ನಂದಿಸಲು ಕೆಲವರು ಪ್ರಯತ್ನಿಸಿದರು. ಆದರೆ ರಾಸಾಯನಿಕ ಮತ್ತು ಅನಿಲ ಸೋರಿಕೆಯಿಂದಾಗಿ ಬೆಂಕಿ ವೇಗವಾಗಿ ಹರಡಲು ಪ್ರಾರಂಭಿಸಿತು. ಟ್ಯಾಂಕರ್‌ನಲ್ಲಿ ನಿರ್ಮಿಸಲಾದ ವಿವಿಧ ಭಾಗಗಳಲ್ಲಿ ಸ್ಫೋಟ ಮುಂದುವರೆಯಿತು. ಅದರ ಶಬ್ದವು ಹಲವಾರು ಕಿಲೋಮೀಟರ್ ದೂರದಲ್ಲಿ ಕೇಳಿಸಿತು. ಅಗ್ನಿಶಾಮಕ ದಳದ ಸಿಬ್ಬಂದಿ ಮೊದಲು 25 ಡ್ರಮ್ ಫೋಮ್ ಸಿಂಪಡಿಸಿ, ನಂತರ 10 ಅಗ್ನಿಶಾಮಕ ದಳದ ತಂಡದ ಸಿಬ್ಬಂದಿ ನೀರು ಚಿಮ್ಮಿಸುವ ಮೂಲಕ ಬೆಂಕಿ ಹತೋಟಿಗೆ ತಂದರು. ಹೋಟೆಲ್ ಸುತ್ತಮುತ್ತ ಹರಿಯಾಣ ಮತ್ತು ಪಂಜಾಬ್‌ನಿಂದ ಬರುವ ಟ್ರಕ್ ಮತ್ತು ಟ್ಯಾಂಕರ್ ಚಾಲಕರು ಡೀಸೆಲ್ ಅನ್ನು ಹೊರತೆಗೆದು ಮಾರಾಟ ಮಾಡುತ್ತಾರೆ ಎಂದು ಹೇಳಲಾಗುತ್ತಿದೆ.
Last Updated : Feb 3, 2023, 8:24 PM IST