ಮಹಿಳೆಯರ ಮಾರ್ಫ್ ಮಾಡಿದ ನಗ್ನ ಚಿತ್ರ ಕಳುಹಿಸುತ್ತಿದ್ದ ತಂದೆ - ಮಗನಿಗೆ ಮಹಿಳೆಯರಿಂದ ಹಿಗ್ಗಾಮುಗ್ಗ ಥಳಿತ - video news
🎬 Watch Now: Feature Video
ತ್ರಿಶೂರ್(ಕೇರಳ): ವ್ಯಾಟ್ಸ್ಆ್ಯಪ್ನಲ್ಲಿ ಮಾರ್ಫ್ ಮಾಡಿದ ನಗ್ನ ಚಿತ್ರಗಳನ್ನು ಹಂಚುತ್ತಿದ್ದ ತಂದೆ ಮತ್ತು ಮಗನನ್ನು ಮಹಿಳೆಯರು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಕೇರಳದ ತ್ರಿಶೂರ್ ಜಿಲ್ಲೆಯಲ್ಲಿ ನಡೆದಿದೆ. ತ್ರಿಶೂರಿನ ಮುರಿಯಾಡ್ ಮೂಲದ ಶಾಜಿ, ಪುತ್ರ ಸಜನ್ ಗ್ರಾಮದ ಕೆಲ ಮಹಿಳೆಯರ ಮಾರ್ಫ್ ಮಾಡಿದ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಆದರೆ, ಈ ವಿಚಾರದ ಬಗ್ಗೆ ಗ್ರಾಮಸ್ಥರು ಅವರನ್ನು ಪ್ರಶ್ನಿಸಿದಾಗ ಗಲಭೆಗೆ ಕಾರಾಣವಾಗಿದೆ. ಗ್ರಾಮದ ಮಹಿಳೆಯರು ಮತ್ತು ಶಾಜಿ ಕುಟುಂಬದ ನಡುವೆ ಮಾರಾಮಾರಿ ನಡೆದಿದೆ. ಘಷರ್ಣೆಯಲ್ಲಿ ಎರಡೂ ಕಡೆಯವರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಾಜಿ ಕುಟುಂಬವು ಮುರಿಯಾಡ್ ಸಿಯೋನ್ ಶ್ರೈನ್ ಚರ್ಚ್ನ ಭಕ್ತರಾಗಿದ್ದರು. ಸ್ವಲ್ಪ ವರ್ಷಗಳ ಬಳಿಕ ಅಲ್ಲಿಂದ ಬೇರೆಡೆ ಹೋಗಿದ್ದರು, ನಂತರ ಚರ್ಚ್ ಮತ್ತು ಶಾಜಿ ಕುಟುಂಬದ ನಡುವೆ ನಿರಂತರವಾಗಿ ಸಮಸ್ಯೆಗಳು ಉಂಟಾಗುತ್ತಲೇ ಇತ್ತು. ಈ ಹಿಂದೆ ಶಾಜಿ ಅವರ ಕಾರು ಶಾಲೆಗೆ ಹೋಗುತ್ತಿದ್ದ ಬಾಲಕನ ಮೇಲೆ ಹರಿದಿದೆ ಎಂದು ಅವರ ಪುತ್ರ ಸಜನ್ ವಿರುದ್ಧ ತ್ರಿಶೂರ್ ಚೈಲ್ಡ್ ಲೈನ್ನಲ್ಲಿ ದೂರು ದಾಖಲಾಗಿತ್ತು. ಇದಾದ ಬಳಿಕ ಗ್ರಾಮದ ಮಹಿಳೆಯರ ನಗ್ನ ಚಿತ್ರವನ್ನು ಮಾರ್ಫ್ ಮಾಡಿ ಹಲವರ ಮೊಬೈಲ್ಗೆ ಕಳುಹಿಸಿದ್ದಾರೆ ಎಂಬ ಶಾಜಿ ಅವರ ವಿರುದ್ಧ ಕೇಳಿ ಬಂದಿದೆ.
Last Updated : Feb 3, 2023, 8:38 PM IST