ಪಾಳು ಬಿದ್ದ ಕೆಫೆಯಲ್ಲಿ ವ್ಯಕ್ತಿಯ ತಲೆ ಬುರುಡೆ ಪತ್ತೆ; ಕೊಲೆ ಶಂಕೆ - ತಲೆಬುರುಡೆ ಪತ್ತೆ
🎬 Watch Now: Feature Video


Published : Jan 12, 2024, 7:57 PM IST
ಕೋಯಿಕ್ಕೋಡ್ (ಕೇರಳ) : ಇಲ್ಲಿನ ಕೋಯಿಕ್ಕೋಡ್ ಜಿಲ್ಲೆಯ ವಟಕರ ಸಮೀಪದ ಅಜಿಯೂರಿನಲ್ಲಿ ಶುಕ್ರವಾರ ಪಾಳು ಬಿದ್ದ ಕೆಫೆಯೊಳಗೆ ಅಪರಿಚಿತ ವ್ಯಕ್ತಿಯೊಬ್ಬರ ತಲೆಬುರುಡೆ ಪತ್ತೆಯಾಗಿದೆ. ಅಜಿಯೂರಿನಲ್ಲಿ ರಾಷ್ಟ್ರೀಯ ಹೆದ್ದಾರಿ 66 ವಿಸ್ತರಣೆ ಕಾಮಗಾರಿಯಲ್ಲಿ ತೊಡಗಿದ್ದ ಕೆಲವು ಕಾರ್ಮಿಕರು ಅಂಗಡಿ ತೆರೆದಾಗ ಪೇಪರ್ ಹಾಗೂ ಪ್ಲಾಸ್ಟಿಕ್ ತ್ಯಾಜ್ಯದೊಂದಿಗೆ ತಲೆ ಬುರುಡೆ ಕಂಡು ಬೆಚ್ಚಿ ಬಿದ್ದಿದ್ದಾರೆ.
ತಕ್ಷಣ ಮಾಹಿತಿ ಪಡೆರು ಘಟನಾ ಸ್ಥಳಕ್ಕೆ ಕೋಯಿಕ್ಕೋಡ್ ಚೊಂಪಲಾ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ತಲೆಬುರುಡೆ ಸುಮಾರು ಆರು ತಿಂಗಳ ಹಳೆಯದು ಎಂದು ತಿಳಿದು ಬಂದಿದೆ. ಯಾರೋ ಕೊಲೆ ಮಾಡಿ ಅಂಗಡಿಯೊಳಗೆ ತಂದು ಹಾಕಿದ್ದಾರಾ? ಇಲ್ಲವೇ ಆತ್ಮಹತ್ಯೆ ಮಾಡಿಕೊಂಡಿದ್ದಾರಾ? ಎಂಬ ಎಲ್ಲ ಪ್ರಶ್ನೆಗಳು ಮೂಡಿವೆ.
ಅಲ್ಲಿನ ಸ್ಥಳೀಯರ ಪ್ರಕಾರ ರಾಷ್ಟ್ರೀಯ ಹೆದ್ದಾರಿ ವಿಸ್ತಾರಣೆಗಾಗಿ ಪ್ರಾಧಿಕಾರವು ಭೂಮಿಯನ್ನು ಸ್ವಾಧೀನ ಪಡಿಸಿಕೊಂಡಿದ್ದರಿಂದ ಕಳೆದ ಒಂದು ವರ್ಷದ ಹಿಂದೆ ಈ ಅಂಗಡಿಯನ್ನು ಬಂದ್ ಮಾಡಲಾಗಿದೆ. ಇದೀಗ ಅಂಗಡಿಯೊಳಗೆ ತ್ಯಾಜ್ಯದ ಜೊತೆಗೆ ತಲೆಬುರುಡೆ ಪತ್ತೆಯಾಗಿರುವುದನ್ನು ಕಂಡು ‘ದೃಶ್ಯಂ’ ಸಿನಿಮಾ ಮಾದರಿ ಕೊಲೆಯೇ ಎಂಬ ಅನುಮಾನ ಮೂಡಿದೆ.
ಇದನ್ನೂ ಓದಿ : ಕಾರು ಅಪಘಾತ: ಹುಟ್ಟಿದ ದಿನವೇ ಸಾವಿಗೀಡಾದ ಬರ್ತಡೇ ಬಾಯ್