ಎದೆ ಮೇಲೆ ಡಿಕೆಶಿ ಹಚ್ಚೆ ಹಾಕಿಸಿಕೊಂಡು ಅಭಿಮಾನ ಮೆರೆದ ವ್ಯಕ್ತಿ - ಎದೆ ಮೇಲೆ ಡಿಕೆಶಿ ಹಚ್ಚೆ
🎬 Watch Now: Feature Video
ಬೆಂಗಳೂರು: ಸಿನಿಮಾ ನಟರು, ರಾಜಕೀಯದವರು, ಕ್ರಿಕೆಟ್ ದಿಗ್ಗಜರು, ಸೆಲೆಬ್ರಿಟಿಗಳ ಟ್ಯಾಟೂ ಹಾಕಿಸಿಕೊಂಡು ಸಂಭ್ರಮಿಸುವವರು ಹೆಚ್ಚು. ಇದೀಗ ಡಿ.ಕೆ ಶಿವಕುಮಾರ್ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಹಿನ್ನೆಲೆ ಅವರ ಅಭಿಮಾನಿಯೊಬ್ಬರು ಎದೆ ಭಾಗದಲ್ಲಿ ಹಚ್ಚೆ ಹಾಕಿಸಿಕೊಂಡು ಸಂಭ್ರಮಿಸಿದರು.
ಕನಕಪುರದ ನಿವಾಸಿ ರವಿ ಎಂಬವರು ಡಿಕೆಶಿ ಭಾವಚಿತ್ರವನ್ನು ಟ್ಯಾಟೂ ಹಾಕಿಸಿಕೊಂಡು ತಮ್ಮ ಅಭಿಮಾನ ಮೆರೆದಿದ್ದಾರೆ. ರವಿ ಡಿಕೆಶಿ ಅವರ ಅಪ್ಪಟ ಅಭಿಮಾನಿ. ಕಳೆದ ಒಂದು ವರ್ಷದಿಂದ ಮೈಮೇಲೆ ಡಿಕೆಶಿ, ಬಂಡೆ ಎಂದು ಹಚ್ಚೆ ಹಾಕಿಸಿಕೊಂಡಿದ್ದಾರೆ. ಸದಾಶಿವನಗರ ಡಿಕೆಶಿ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು "ಡಿ. ಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಬೇಕಿತ್ತು. ಆದರೆ ಆದರೆ ಸಿಎಂ ಪಟ್ಟ ಸಿಗದೇ ಇರುವುದು ಬೇಸರವಾಗಿದೆ. ಮುಂದೆ ಅವರು ಸಿಎಂ ಆಗುತ್ತಾರೆ ಎಂಬ ವಿಶ್ವಾಸ ಇದೆ. ಹಚ್ಚೆ ಹಾಕಿಸಿಕೊಂಡಿರುವುದನ್ನು ಈವರೆಗೆ ಯಾರಿಗೂ ತೋರಿಸಿರಲಿಲ್ಲ. ಇಂದು ಡಿಕೆಶಿ ಅವರನ್ನು ಭೇಟಿಯಾಗಿ ಅವರಿಗೆ ಶುಭ ಹಾರೈಸಲು ಆಗಮಿಸಿದ್ದೇನೆ" ಎಂದು ತಿಳಿಸಿದರು.
ಇದನ್ನೂ ಓದಿ: ಎದೆ ಮೇಲೆ 'ಸಿದ್ದರಾಮಯ್ಯ ಸಿಎಂ' ಎಂದು ಟ್ಯಾಟೂ ಹಾಕಿಸಿಕೊಂಡ ವ್ಯಕ್ತಿ: ವಿಡಿಯೋ