ಸರಪಳಿಯಿಂದ ಬಂಧನಕ್ಕೊಳಗಾಗಿದ್ದ ಕಾಸ್ಗಂಜ್ ಯುವಕನ ರಕ್ಷಣೆ-ವಿಡಿಯೋ - Sahawar Tehsil Circle Officer Deep Kumar Pant

🎬 Watch Now: Feature Video

thumbnail

By

Published : Feb 16, 2023, 11:19 AM IST

ಕಾಸ್ಗಂಜ್(ಉತ್ತರ ಪ್ರದೇಶ): ಜಿಲ್ಲೆಯ ಸಹವರ್ ತಹಸಿಲ್ ಪ್ರದೇಶದಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯೊಬ್ಬ ಕಬ್ಬಿಣದ ಕಂಬದಲ್ಲಿ ಸರಪಳಿಯಿಂದ ಬಂಧನಕ್ಕೊಳಗಾಗಿರುವ ವಿಡಿಯೋ ಎಲ್ಲೆಡೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ವಿಡಿಯೋ ಹೊರಬಿದ್ದ ಸ್ವಲ್ಪ ಸಮಯದಲ್ಲಿ ಈ ವಿಷಯ ಪೊಲೀಸರ ಗಮನಕ್ಕೆ ಬಂದಿದ್ದು, ನಂತರ ಎಚ್ಚೆತ್ತುಕೊಂಡ ಪೊಲೀಸರು ಯುವಕನನ್ನು ಸರಪಳಿಯಿಂದ ಬಿಡಿಸಿದ್ದಾರೆ. ನಂತರ ಆತನ ಕುರಿತು ತನಿಖೆ ನಡೆಸಿದ ಪೊಲೀಸರು ಯುವಕನನ್ನು ರಾಜ್‌ಕುಮಾರ್ ಎಂದು ಗುರುತಿಸಿದ್ದಲ್ಲದೆ, ಆತನ ಮನೆಗೆ ಕಳುಹಿಸಲಾಗಿದೆ ಎಂದು ಸಹವರ್ ತಹಸಿಲ್ ಸರ್ಕಲ್ ಅಧಿಕಾರಿ ದೀಪ್ ಕುಮಾರ್ ಪಂತ್ ತಿಳಿಸಿದ್ದಾರೆ.  

ಈ ಸಂದರ್ಭದಲ್ಲಿ ಯುವಕ ರಾಜ್​ಕುಮಾರ್​ನ ಸಹೋದರ ವಿಪಿನ್‌, ಆತ ಮಾನಸಿಕಾಗಿ ಅಸ್ವಸ್ಥ ಹಾಗಾಗಿ ಅವನಿಗೆ ಚಿಕಿತ್ಸೆ ಆಗ್ರಾದಲ್ಲಿ ನಡೆಯುತ್ತಿದೆ. ಈ ಸಮಸ್ಯೆಯಿಂದ ಆತ ಸಾರ್ವಜನಿಕ ಸ್ಥಳಗಳಲ್ಲಿ ಜನರ ಮೇಲೆ ಇಟ್ಟಿಗೆ ಮತ್ತು ಕಲ್ಲುಗಳನ್ನು ಎಸೆಯುತ್ತಿದ್ದನು. ಇದರ ಜೊತೆಗೆ ಒಮ್ಮೊಮ್ಮೆ ನಾಪತ್ತೆಯು ಆಗುತ್ತಾನೆ. ಇದರಿಂದಾಗಿ ಅತನನ್ನು ಹುಡುಕುವುದು ಕಷ್ಟವಾಗುತ್ತದೆ. ಅದಕ್ಕಾಗಿ ಆತನನ್ನು ಕಬ್ಬಿಣದ ಕಂಬಕ್ಕೆ ಸರಪಳಿಯಿಂದ ಬಂಧಿಸಲಾಯಿತು ಎಂದು ಯುವಕನ ಸಹೋದರ ತಿಳಿಸಿದ್ದಾನೆ.

ಇದನ್ನೂ ಓದಿ: ಬೆಂಗಳೂರಿನ ಜಿಟಿ ಗ್ಯಾರೇಜ್ ಟೆಕ್​ನಲ್ಲಿ ಅಗ್ನಿ ಅವಘಡ: 10ಕ್ಕೂ ಅಧಿಕ ಕಾರುಗಳು ಸುಟ್ಟು ಭಸ್ಮ

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.