ಜಿಂಕೆ ರಕ್ಷಣೆಗೆ ಕ್ರಮ: ಮಾಂಸಹಾರಿ ಪ್ರಾಣಿಗಳಿಲ್ಲದ ಸಂರಕ್ಷಿತ ಪ್ರದೇಶಕ್ಕೆ ಬಿಡುಗಡೆ- ವಿಡಿಯೋ

By

Published : Mar 27, 2023, 10:44 AM IST

thumbnail

ಮಧ್ಯಪ್ರದೇಶ : ಇಲ್ಲಿನ ಕನ್ಹಾ ಉದ್ಯಾನವನದಿಂದ ತಂದ 19 ಸ್ವಾಂಪ್​​​​​ ಡೀರ್ ​(ಜೌಗು ಜಿಂಕೆ) ಗಳನ್ನು ಬಾಂಧವ್​ಗಢ ಹುಲಿ ಸಂರಕ್ಷಿತ ಪ್ರದೇಶದ ಮಾಗಧಿ ವಲಯಕ್ಕೆ ಸುರಕ್ಷಿತವಾಗಿ ಬಿಡಲಾಗಿದೆ. ಒಟ್ಟು 100 ಜಿಂಕೆಗಳನ್ನು ತರಲು ಕೇಂದ್ರ ಸರ್ಕಾರವು ಅನುಮತಿ ನೀಡಿತ್ತು. ಈ ಪೈಕಿ ಸುಮಾರು 50 ಜಿಂಕೆಗಳನ್ನು ಈ ವರ್ಷದಲ್ಲಿ ಸಂರಕ್ಷಿತ ಅರಣ್ಯಕ್ಕೆ ಬಿಡಲಾಗುತ್ತಿದೆ. ಸದ್ಯ 19 ಜಿಂಕೆಗಳನ್ನು ಮಾಗಧಿ ವಲಯ ಸೇರಿಸಲಾಗಿದ್ದು, 11 ಗಂಡು ಮತ್ತು 8 ಹೆಣ್ಣು ಜಿಂಕೆಗಳಿವೆ.

ಸಂರಕ್ಷಿತಾರಣ್ಯದಲ್ಲಿ ಜಿಂಕೆಗಳಿಗೆ ವಿಶೇಷ ಆವರಣವನ್ನು ನಿರ್ಮಿಸಲಾಗಿದೆ. ಇದು ಮಾಂಸಹಾರಿ ಪ್ರಾಣಿಗಳ ನಿರೋಧಕವಾಗಿದೆ. ಇದರ ಒಳಗೆ ಯಾವುದೇ ಮಾಂಸಹಾರಿ ಪ್ರಾಣಿಗಳಿಗೆ ಹೋಗಲು ಅವಕಾಶ ಇಲ್ಲ. ಇದು ಜಿಂಕೆಗಳ ರಕ್ಷಣೆಗೆ ಪೂರಕವಾಗಿದೆ. ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಆನೆಗಳೂ ಇವೆ. ಆನೆಗಳು ಈ ಆವರಣಗಳಿಗೆ ಯಾವುದೇ ಹಾನಿ ಮಾಡದಂತೆ ಬೇಕಾದ ಕ್ರಮ ಕೈಗೊಂಡಿದ್ದೇವೆ ಎಂದು ಬಾಂಧವಗಢ ಹುಲಿ ಸಂರಕ್ಷಿತಾರಣ್ಯದ ಸುಧೀರ್​ ಮಿಶಾ ಹೇಳಿದ್ದಾರೆ.

ಇದನ್ನೂ ಓದಿ : ರೈಲಿನಡಿಗೆ ಬೀಳುತ್ತಿದ್ದ ಪ್ರಯಾಣಿಕನ ಪ್ರಾಣ ಉಳಿಸಿದ ರೈಲ್ವೆ ಪೊಲೀಸ್​: ವಿಡಿಯೋ

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.