ಹಗಲಿನಲ್ಲಿ ಅಪರೂಪಕ್ಕೆ ಕಂಡ ಲೂನಾ ಮೊಥ್, ಇದಕ್ಕೆ ಬಾಯಿಯೇ ಇಲ್ಲಾ! VIDEO
🎬 Watch Now: Feature Video
ಚಾಮರಾಜನಗರ: ಲೂನಾ ಮೊಥ್ ಎಂಬ ನಿಶಾಚರಿ ಕೀಟ ಹಗಲಿನಲ್ಲಿ ಕಾಣಿಸಿಕೊಳ್ಳುವ ಮೂಲಕ ಜನರನ್ನು ಬೆರಗಾಗಿಸಿದ ಘಟನೆ ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿ ನಡೆದಿದೆ. ಲೂನಾ ಮೊಥ್ ಎಂದು ಕರೆಯುವ ಕೀಟ ಅಪರೂಪವಾದ ಕೀಟವಲ್ಲದಿದ್ದರೂ ಜನರ ಕಣ್ಣಿಗೆ ಕಾಣುವುದು ವಿರಳ. ರಾತ್ರಿ ವೇಳೆ ಹೆಚ್ಚು ಕ್ರಿಯಾಶೀಲವಾಗಿರುವ ಇದು ಹಗಲಿನಲ್ಲಿ ಕಾಣುವುದು ಇನ್ನೂ ಅಪರೂಪ. ಇದರ ಅಗಲವಾದ ರೆಕ್ಕೆಗಳು, ವಿಶೇಷವಾದ ಕಣ್ಣುಗಳು ಎಲ್ಲರನ್ನೂ ಸೆಳೆಯಲಿವೆ. ಇದಕ್ಕೆ ಜೀರ್ಣಾಂಗ ವ್ಯವಸ್ಥೆಯೇ ಇಲ್ಲದಿದ್ದರಿಂದ ಬಾಯಿಯೂ ಇಲ್ಲ. ಆದ್ದರಿಂದ ಇದರ ಜೀವಿತಾವಧಿ 7 ದಿನಗಳಿಗೆ ಕೊನೆಗೊಳ್ಳಲಿದೆ. ಬಿಳಿಗಿರಿ ಬನದಲ್ಲಿ ಸಾಕಷ್ಟು ಸಸ್ಯ-ಪ್ರಾಣಿ ಪ್ರಬೇಧಗಳಿದ್ದು, ಹಗಲಿನಲ್ಲಿ ಲೂನಾ ಮೊಥ್(Luna moth) ಕಂಡ ಸೋಲಿಗರು ರೋಮಾಂಚಿತರಾಗಿದ್ದಾರೆ.
ಇತ್ತೀಚೆಗೆ ಮೈಸೂರಿನ ಸಂಜನಗೂಡಿನಲ್ಲಿ ಅಪರೂಪದ ಚಿಪ್ಪುಹಂದಿ ಕಾಣಿಸಿಕೊಂಡಿತ್ತು. ರಾಘವೇಂದ್ರ ಸ್ವಾಮಿ ಮಠದ ಹಿಂಭಾಗದ ಮನೆಯೊಂದರ ಬಾವಿಯಲ್ಲಿದ್ದ ಇದು ಕಾಣಿಸಿಕೊಂಡಿತ್ತು. ಬಾವಿಯಲ್ಲಿದ್ದ ಚಿಪ್ಪು ಹಂದಿಯನ್ನು ಕಂಡ ಮನೆಯವರು, ಸ್ನೇಕ್ ಬಸವರಾಜ ಎಂಬುವವರಿಗೆ ರಕ್ಷಣೆ ಮಾಡುವಂತೆ ತಿಳಿಸಿದ್ದರು. ಒಂದು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಚಿಪ್ಪುಹಂದಿಯನ್ನ ಹೊರತೆಗೆಯಲಾಗಿತ್ತು. ಅಪರೂಪ ಚಿಪ್ಪು ಹಂದಿಯ ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ.