ಜಗತ್ತಿನ ಸಮಸ್ಯೆ ನಿಭಾಯಿಸಲು ಭಾರತ ಅಮೆರಿಕ ಹತ್ತಿರ.. ಹತ್ತಿರ: ಮೆರ್ಕ್ ಕಂಪನಿ ಉಪಾಧ್ಯಕ್ಷೆ ಜೆನೆಲ್ಲೆ ಕೃಷ್ಣಮೂರ್ತಿ - ಈಟಿವಿ ಭಾರತ ಕನ್ನಡ

🎬 Watch Now: Feature Video

thumbnail

By

Published : Jun 24, 2023, 7:50 AM IST

ವಾಷಿಂಗ್ಟನ್​ ಡಿಸಿ (ಅಮೆರಿಕ): ಪ್ರಧಾನಿ ಮೋದಿ ಭಾರತೀಯ ಅನಿವಾಸಿಗಳನ್ನುದ್ದೇಶಿಸಿ ಮಾಡಿದ ಭಾಷಣದ ಬಳಿಕ ಔಷಧ ಉತ್ಪಾದನೆ ದೈತ್ಯ ಕಂಪನಿ ಮೆರ್ಕ್​ನ ಉಪಾಧ್ಯಕ್ಷರಾದ ಜೆನೆಲ್ಲೆ ಕೃಷ್ಣಮೂರ್ತಿ ಸಂತಸ ವ್ಯಕ್ತಪಡಿಸಿದರು.  "ಜಗತ್ತಿನ ಸಮಸ್ಯೆಗಳನ್ನು ನಿಭಾಯಿಸಲು ಭಾರತ ಮತ್ತು ಅಮೆರಿಕ ಹತ್ತಿರವಾಗುತ್ತಿರುವುದು ತುಂಬಾ ಸಂತಸದಾಯಕವಾಗಿದೆ. ಎರಡು ಅತ್ಯುತ್ತಮ ಪ್ರಜಾಪ್ರಭುತ್ವ ರಾಷ್ಟ್ರಗಳ ಒಂದಾಗುತ್ತಿವೆ. ಇದಕ್ಕಿಂತ ಉತ್ತಮವಾದದ್ದು ಬೇರಾವುದು ಇಲ್ಲ" ಎಂದು ಕೃಷ್ಣಮೂರ್ತಿ ಬಣ್ಣಿಸಿದರು.

ಬಳಿಕ ಯುಎಸ್‌ಐಎಸ್‌ಪಿಎಫ್‌ನ ಅಧ್ಯಕ್ಷ-ಸಿಇಒ, ಮುಖೇಶ್ ಅಘಿ ಎಂಬುವವರು "ಇದೊಂದು ಐತಿಹಾಸಿಕ ಕ್ಷಣವಾಗಿದೆ. ಭಾರತ ಮತ್ತು ಅಮೆರಿಕ ನಡುವಿನ ಪಾಲುದಾರಿಕೆಯು ಜಗತ್ತಿಗೆ ಪ್ರಯೋಜನಕಾರಿಯಾಗಲಿದೆ. ಹಾಗಾಗಿ, ಪ್ರಧಾನಿ ಮೋದಿ ಭೇಟಿ ಪ್ರಯೋಜನಾಕರಿಯಾಗಲಿದೆ. ಭೌಗೋಳಿಕವಾಗಿ, ಎರಡೂ ದೇಶಗಳು ಚೀನಾಕ್ಕೆ ವಿರುದ್ಧವಾಗಿವೆ ಎಂಬುದು ಗಮನಿಸ ಬೇಕಾದ ಅಂಶ. ಅಮೆರಿಕದ ಬಹಳಷ್ಟು ಕಂಪನಿಗಳು, ಭಾರತದೊಂದಿಗೆ ವ್ಯವಹರಿಸಲು ಎದುರ ನೋಡುತ್ತಿವೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.  

ಇನ್ನು ಪ್ರಧಾನಿ ಮೋದಿ ಅವರ ಭಾರತೀಯ ವಲಸಿಗರ ಕಾರ್ಯಕ್ರಮದಲ್ಲಿ ಉನ್ನತ ಸ್ಥಾನದಲ್ಲಿರುವ ಅನೇಕರು ಭಾಗಿಯಾಗಿದ್ದರು. ಕಾರ್ಯಕ್ರಮದ ಬಳಿಕ ಮಾಧ್ಯಮಗಳಿಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. 

ಇದನ್ನೂ ಓದಿ: ನನಗೆ ಮೋದಿಯವರ ಬಗ್ಗೆ ತುಂಬಾ ಹೆಮ್ಮೆ ಇದೆ: ​ಅಮೆರಿಕ ಸಂಸದ ಕನ್ನಡಿಗ ಶ್ರೀ ಥಾನೇದಾರ್ ಸಂತಸ.. ಯಾರೀ ಶ್ರೀ 

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.