ಸೇತುವೆ ಮೇಲಿಂದ ಉರುಳಿಬಿದ್ದ ಲಾರಿ - ವಿಡಿಯೋ - ಈಟಿವಿ ಭಾರತ ಕನ್ನಡ
🎬 Watch Now: Feature Video
ಬೆಳಗಾವಿ : ಕಟ್ಟಿಗೆ ತುಂಬಿಕೊಂಡು ಹೋಗುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಸೇತುವೆ ಮೇಲಿಂದ ಕೆಳಗೆ ಉರುಳಿರುವ ಘಟನೆ ಎಂ.ಕೆ. ಹುಬ್ಬಳ್ಳಿ ಪಟ್ಟಣದ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ನಡೆದಿದೆ. ಇಲ್ಲಿನ ಮಲಪ್ರಭಾ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆಯಲ್ಲಿ ಇಂದು ಬೆಳಗಿನ ಜಾವ ಅಪಘಾತ ಸಂಭವಿಸಿತು. ಮಹಾರಾಷ್ಟ್ರ ಮೂಲದ ಲಾರಿ ಚಾಲಕ ರಾಮದಾಸ್ ಗೋಡೆ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಇದನ್ನೂ ಓದಿ : ಮಧ್ಯಪ್ರದೇಶದಲ್ಲಿ ಕೊಳವೆ ಬಾವಿಗೆ ಬಿದ್ದ ಬಾಲಕಿ: ಭರದಿಂದ ಸಾಗಿದ ರಕ್ಷಣಾ ಕಾರ್ಯ- ವಿಡಿಯೋ
ಅಪಘಾತಕ್ಕೀಡಾದ ಲಾರಿ ಚಿಕ್ಕಮಗಳೂರಿನಿಂದ ಮಹಾರಾಷ್ಟ್ರ ಕಡೆಗೆ ಕಟ್ಟಿಗೆ ಸಾಗುತ್ತಿತ್ತು. ಚಾಲಕನ ನಿಯಂತ್ರಣ ತಪ್ಪಿದ ಲಾರಿ ಸೇತುವೆ ಮೇಲಿಂದ ಕೆಳಗೆ ಉರುಳಿ ಬಿದ್ದಿದೆ. ಸೇತುವೆ ಮೇಲಿಂದ ಉರುಳಿ ಬಿದ್ದ ಹಿನ್ನಲೆಯಲ್ಲಿ ಲಾರಿ ಸಂಪೂರ್ಣ ನಜ್ಜುಗುಜ್ಜಾಗಿದೆ. ಅಲ್ಲದೆ ಲಾರಿಯಲ್ಲಿ ಸಾಗಿಸುತ್ತಿದ್ದ ಕಟ್ಟಿಗೆಯೂ ಸ್ಥಳದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ. ಕಿತ್ತೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ : ಸೈಕಲ್ ಮೇಲೆ ತೆರಳುತ್ತಿದ್ದ 7 ವಿದ್ಯಾರ್ಥಿನಿಯರಿಗೆ ಗುದ್ದಿಕೊಂಡು ಹೋದ ಬೊಲೆರೋ - Video