ಲಾರಿ-ಓಮ್ನಿ ಮುಖಾಮುಖಿ ಡಿಕ್ಕಿ: ಮಗು ಸೇರಿ 6 ಮಂದಿ ದುರ್ಮರಣ - ತಿರುಚ್ಚಿ ಬೈಪಾಸ್ ಬಳಿ ಲಾರಿ ಮತ್ತು ಓಮ್ನಿ ನಡುವೆ ಡಿಕ್ಕಿ
🎬 Watch Now: Feature Video
ತಿರುಚ್ಚಿ(ತಮಿಳುನಾಡು): ತಿರುಚ್ಚಿ ಬೈಪಾಸ್ ಬಳಿ ಲಾರಿ ಮತ್ತು ಓಮ್ನಿ ನಡುವೆ ಡಿಕ್ಕಿ ಸಂಭವಿಸಿ ಆರು ಮಂದಿ ಸಾವನ್ನಪ್ಪಿದ್ದಾರೆ. ಸೇಲಂ ಜಿಲ್ಲೆಯ ಎಡಪ್ಪಾಡಿಯಿಂದ ತಿರುಚ್ಚಿ ಮೂಲಕ ಕುಂಭಕೋಣಂ ದೇವಸ್ಥಾನಕ್ಕೆ ಓಮ್ನಿಯಲ್ಲಿ ಕುಟುಂಬದ 9 ಸದಸ್ಯರು ಪ್ರಯಾಣಿಸುತ್ತಿದ್ದರು. ಈ ವೇಳೆ ಎದುರಿನಿಂದ ಬಂದ ಲಾರಿಯೊಂದು ವಾಹನಕ್ಕೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ತಿರುಚ್ಚಿ ಜಿಲ್ಲೆಯ ಟೋಲ್ ಗೇಟ್ ಬಳಿ ಮುಂಜಾನೆ 3.50ಕ್ಕೆ ಅಪಘಾತ ಸಂಭವಿಸಿದೆ. ಓಮ್ನಿಯಲ್ಲಿದ್ದ ಒಂದು ಮಗು, ನಾಲ್ವರು ಮಹಿಳೆಯರು ಸೇರಿ ಒಟ್ಟು ಆರು ಮಂದಿ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಧಾವಿಸಿದ ವಾಟಾಳ ಪೊಲೀಸರು ಗಾಯಾಳುಗಳನ್ನು ರಕ್ಷಿಸಿ ಸಮೀಪದ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ರವಾನಿಸಿದ್ದಾರೆ. ಇವರಿಗೆ ತೀವ್ರ ನಿಗಾ ಘಟಕಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತದಲ್ಲಿ ಮೃತಪಟ್ಟ ಮೃತದೇಹಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ತಿರುಚ್ಚಿ ಸರ್ಕಾರಿ ಜನರಲ್ ಆಸ್ಪತ್ರೆಗೆ ರವಾನಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಜಿತ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಇದನ್ನೂ ಓದಿ: ಅವಂತಿಪೋರಾದಲ್ಲಿ ಬಸ್ ಪಲ್ಟಿ: ನಾಲ್ವರ ದುರ್ಮರಣ, 24ಕ್ಕೂ ಅಧಿಕ ಮಂದಿಗೆ ಗಾಯ