ಶಟಲ್ ಆಡುವಾಗ ಹೃದಯಾಘಾತದಿಂದ ವ್ಯಕ್ತಿ ಸಾವು.. ಸಿಸಿಟಿವಿಯಲ್ಲಿ ದೃಶ್ಯ ಸೆರೆ - ETV Bharath Kannada news
🎬 Watch Now: Feature Video
ಜಗಿತ್ಯಾಲ (ತೆಲಂಗಾಣ): ಸಮಾನ್ಯವಾಗಿ ಎಲ್ಲರ ಜೀವನ ಒತ್ತಡ ಮತ್ತು ತುರ್ತಿನಿಂದ ಕೂಡಿರುತ್ತದೆ. ಇದರಿಂದಾಗಿ ಹೃದಯಾಘಾತ ದಿನೇ ದಿನೆ ಹೆಚ್ಚುತ್ತಲೇ ಇದೆ. ಕೋವಿಡ್ ನಂತರ ಹೃದಯಾಘಾತ ಸಂಖ್ಯೆ ಹೆಚ್ಚಾಗಿದೆ ಎಂದು ಕೆಲ ಅಧ್ಯಯನಗಳು ತಿಳಿಸುತ್ತಿವೆ. ಆದರೆ, ಒತ್ತಡದ ಜೀವನ ಜನರನ್ನು ಹೈರಾಣು ಮಾಡುತ್ತಿದೆ. ಕೋವಿಡ್ ಬಂದ ನಂತರ ಜನ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದಾರೆ. ಆದರೆ, ವಾಯುಮಾಲಿನ್ಯ, ಆಹಾರ ಪದ್ಧತಿ, ದೇಹದಲ್ಲಿ ಈಗಾಗಲೇ ಸೇರಿಕೊಂಡಿರುವ ಕೊಬ್ಬಿನ ಅಂಶದಿಂದ ಯುವಕರಲ್ಲೂ ಹೃದಯಾಘಾತ ಸಂಭವಿಸುತ್ತಿದೆ.
ತೆಲಂಗಾಣದ ಜಗಿತ್ಯಾಲ ಎಂಬಲ್ಲಿ 53 ವರ್ಷದ ಬುಸಾ ರಾಜವೆಂಕಟ ಗಂಗಾರಾಮ್ ಎಂಬುವವರು ಶುಕ್ರವಾರ ಬೆಳಗ್ಗೆ ಶಟಲ್ ಆಡುವಾಗ ಏಕಾಏಕಿ ಕುಸಿದು ಬಿದ್ದಿದ್ದಾರೆ. ಒಟ್ಟಿಗೆ ಆಡುತ್ತಿದ್ದ ಸಹಚರರು ಸಹಕಾರಕ್ಕೆ ಬಂದು ತುರ್ತಾಗಿ ಪ್ರಥಮ ಚಿಕಿತ್ಸೆ ಮಾಡಿದರೂ ಬದುಕಿಸಿಕೊಳ್ಳಲಾಗಿಲ್ಲ. ಈ ಹಿಂದೆ ರಾಜವೆಂಕಟ ಗಂಗಾರಾಮ್ ಅವರಿಗೆ ಒಮ್ಮೆ ಹೃದಯಾಘಾತವಾಗಿದ್ದಾಗ ಸ್ಟೆಂಟ್ ಅಳವಡಿಸಲಾಗಿತ್ತು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಬುಸಾ ರಾಜವೆಂಕಟ ಗಂಗಾರಾಮ್ ಗಾರ್ಮೆಂಟ್ಸ್ ಅಂಗಡಿ ವ್ಯಾಪಾರಿ ಎಂದು ತಿಳಿದು ಬಂದಿದೆ. ಇತ್ತೀಚೆಗೆ ಇಂತಹ ಘಟನೆಗಳು ಅಲ್ಲಲ್ಲಿ ವರದಿಯಾಗುತ್ತಿದೆ.
ಇದನ್ನೂ ಓದಿ: ಯೋಗಾಭ್ಯಾಸದ ವೇಳೆ ಕಾಣಿಸಿಕೊಂಡ ಎದೆ ನೋವು: ವ್ಯಕ್ತಿ ಹಠಾತ್ ಸಾವು