ಮೈಸೂರು: ಕಬ್ಬಿನ ಗದ್ದೆಯಲ್ಲಿ ಮೂರು ಚಿರತೆ ಮರಿಗಳು ಪತ್ತೆ... ವಿಡಿಯೋ... - ನಾಗರಹೊಳೆ ಅರಣ್ಯ ಪ್ರದೇಶ
🎬 Watch Now: Feature Video
Published : Dec 7, 2023, 9:50 AM IST
ಮೈಸೂರು: ನಾಗರಹೊಳೆ ಅರಣ್ಯ ಪ್ರದೇಶದ ಅಂತರಸಂತೆ ವ್ಯಾಪ್ತಿಯಲ್ಲಿ ಕರಿ ಚಿರತೆ ಕಾಣಿಸಿಕೊಂಡು ಸುದ್ದಿಯಾಗಿತ್ತು. ಇದೀಗ, ಮೈಸೂರು ತಾಲೂಕಿನ ಆಯರಹಳ್ಳಿ ಗ್ರಾಮದ ಜಮೀನಿನಲ್ಲಿ ಕರಿ ಚಿರತೆ ಮರಿ ಸೇರಿ ಮೂರು ಮರಿಗಳು ಪತ್ತೆಯಾಗಿವೆ.
ಮೈಸೂರು ತಾಲೂಕುಗಳ ಸುತ್ತಮುತ್ತಲ ಜನ ಹುಲಿ ಆತಂಕದಲ್ಲಿರುವಾಗಲೇ ರೈತರೊಬ್ಬರ ಜಮೀನಿನಲ್ಲಿ ಮೂರು ಚಿರತೆ ಮರಿಗಳು ಕಾಣಿಸಿಕೊಂಡಿವೆ. ಗ್ರಾಮದ ರೈತ ದ್ಯಾವಣ್ಣ ನಾಯಕ ಅವರು ಕಬ್ಬನ್ನು ಕಡಿಯುವಾಗ ಚಿರತೆ ಮರಿಗಳು ಕಾಣಿಸಿಕೊಂಡಿವೆ. ತಕ್ಷಣ ಅವುಗಳ ರಕ್ಷಣೆ ಮಾಡಿದ ದ್ಯಾವಣ್ಣ ನಾಯಕ ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.
2 ವಾರದ ಹಿಂದೆಯಷ್ಟೇ ಹುಟ್ಟಿರುವ ಈ ಮರಿಗಳನ್ನು ತಾಯಿ ಜತೆ ಸೇರಿಸಲು ಅರಣ್ಯ ಇಲಾಖೆ ಪ್ರಯತ್ನ ಮುಂದುವರಿಸಿದೆ. 'ಹುಲಿ ಕಾರ್ಯಾಚರಣೆಯಲ್ಲಿ ಇರುವಾಗಲೇ ಚಿರತೆ ಮರಿಗಳು ಸಿಕ್ಕಿರುವ ಬಗ್ಗೆ ಮಾಹಿತಿ ಲಭಿಸಿತು. ಹುಟ್ಟಿ ಇನ್ನೂ ಎರಡು ವಾರಗಳು ಕಳೆದಿಲ್ಲ. ಪುಟ್ಟ ಮರಿಗಳು ಇವು. ಹಾಗಾಗಿ ಮರಿಗಳನ್ನು ತಾಯಿ ಜತೆ ಸೇರಿಸುವ ಕಾರ್ಯಾಚರಣೆ ಹಮ್ಮಿಕೊಂಡಿದ್ದೇವೆ. ಈ ಸಮಯದಲ್ಲಿ ಅವು ತಾಯಿ ಜೊತೆ ಇದ್ದರೆ ಕ್ಷೇಮ ಎಂದು ಡಿಸಿಎಫ್ ಬಸವರಾಜ್ ಹೇಳಿದ್ದಾರೆ.
ಇದನ್ನೂ ಓದಿ: ವಸತಿ ಪ್ರದೇಶದಲ್ಲಿ ಮೊಸಳೆ ಪ್ರತ್ಯಕ್ಷ: ಸುರಕ್ಷಿತ ತಾಣಕ್ಕೆ ರವಾನೆ