ವಿಜಯನಗರ: ಬೈಕ್ ಸವಾರನ ಮೇಲೆ ಚಿರತೆ ದಾಳಿ, ಯುವಕನಿಗೆ ಗಾಯ - ಹನುಮನಹಳ್ಳಿ ಗ್ರಾಮದ ಬಳಿಯೂ ಚಿರತೆ ಪ್ರತ್ಯಕ್ಷ
🎬 Watch Now: Feature Video
ವಿಜಯನಗರ : ಜಿಲ್ಲೆಯಲ್ಲಿ ಪ್ರತ್ಯೇಕ ಎರಡು ಕಡೆ ಚಿರತೆಗಳು ಕಾಣಿಸಿಕೊಂಡಿದ್ದು, ಬೈಕ್ ಸವಾರನ ಮೇಲೆ ದಾಳಿ ಮಾಡಿ ಗಾಯಗೊಳಿಸಿದ ಘಟನೆಯೂ ನಡೆದಿದೆ. ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಮಾಗಳ - ಹಿರೇಹಡಗಲಿ ಗ್ರಾಮಗಳ ರಸ್ತೆಯಲ್ಲಿ ಚಿರತೆ ಬೈಕ್ ಮೇಲೆ ದಾಳಿ ನಡೆಸಿದೆ. ಪ್ರವೀಣ ಎಂಬ ಯುವಕ ಬೈಕ್ನಲ್ಲಿ ತೆರಳುತ್ತಿದ್ದಾಗ ಎರಗಿದ ಚಿರತೆ ಪರಚಿ ಗಾಯಗೊಳಿಸಿದೆ.
ಚಿರತೆ ದಾಳಿಯಿಂದ ಭಯಗೊಂಡ ಯುವಕ ಜೋರಾಗಿ ಕಿರುಚಾಡಿದ್ದಾನೆ. ಯುವಕನ ಚೀರಾಟ ಕೇಳಿ ಸುತ್ತಮುತ್ತಲಿನ ಜನರು ಓಡಿ ಬಂದಿದ್ದಾರೆ. ಜನರ ಗಲಾಟೆಗೆ ಹೆದರಿದ ಚಿರತೆ ಕಾಡಿನತ್ತ ಕಾಲ್ಕಿತ್ತಿದೆ. ಗಾಯಗೊಂಡ ಯುವಕನಿಗೆ ಸ್ಥಳೀಯ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಭಾಗದಲ್ಲಿ ಚಿರತೆ ದಾಳಿ ಹೆಚ್ಚುತ್ತಿದ್ದು, ಅರಣ್ಯ ಇಲಾಖೆಯವರು ಬೋನ್ ಇರಿಸಿ, ಸೆರೆ ಹಿಡಿಯಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಹೊಸಪೇಟೆಯಲ್ಲೂ ಚಿರತೆ ಪ್ರತ್ಯಕ್ಷ: ಇನ್ನೊಂದೆಡೆ ಹೊಸಪೇಟೆ ತಾಲೂಕಿನ ಹನುಮನಹಳ್ಳಿ ಗ್ರಾಮದ ಬಳಿಯೂ ಚಿರತೆ ಪ್ರತ್ಯಕ್ಷವಾಗಿದ್ದು, ಜನರು ಭಯಭೀತರಾದ್ದಾರೆ. ಇದರಿಂದ ಹನುಮನಹಳ್ಳಿಯ ಸುತ್ತಲಿನ ಕಾರ್ಖಾನೆಗಳಿಗೆ ಕೆಲಸಕ್ಕೆ ಹೋಗುವ ಕಾರ್ಮಿಕರು ಆತಂಕದಲ್ಲಿ ತೆರಳಬೇಕಾದ ಸ್ಥಿತಿ ಎದುರಾಗಿದೆ. ಚಿರತೆ ಸೆರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಜನರು ಆಗ್ರಹಿಸಿದ್ದಾರೆ.