ಗಣಪನಿಗೆ ವಾಣಿಜ್ಯನಗರಿ ಜನರಿಂದ ಅದ್ಧೂರಿ ವಿದಾಯ: ಡಿಜೆ ಸೌಂಡಿಗೆ ಕುಣಿದು ಕುಪ್ಪಳಿಸಿದ ಯುವಪಡೆ - hubballi ganesha immersion

🎬 Watch Now: Feature Video

thumbnail

By ETV Bharat Karnataka Team

Published : Sep 28, 2023, 11:06 PM IST

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯ ಸಾರ್ವಜನಿಕ ಗಣೇಶೋತ್ಸವಕ್ಕೆ ಇಂದು ಅಂತಿಮ ದಿನವಾಗಿದ್ದು, ನಗರದಲ್ಲಿಂದು ಬೃಹತ್ ಮೆರವಣಿಗೆ ಮೂಲಕ ಜನರು ಗಣಪತಿಗೆ ವಿದಾಯ ಹೇಳಿದ್ದಾರೆ. 

ನಗರದ ದುರ್ಗದಬೈಲ್, ದಾಜೀಬಾನ್ ಪೇಟೆ , ಮರಾಠಾ ಗಲ್ಲಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಪ್ರತಿಷ್ಠಾಪಿಸಲಾಗಿದ್ದ ಬೃಹತ್ ಗಣೇಶ ಮೂರ್ತಿಗಳ ಬೃಹತ್ ಮೆರವಣಿಗೆ ನಡೆಸಲಾಯಿತು.‌ ಡಿಜೆ ಅಬ್ಬರ, ಗಣಪತಿ ಬಪ್ಪ ಮೋರಯಾ ಘೋಷಣೆಗಳೊಂದಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು. 

ಯುವಕ, ಯುವತಿಯರು ಡಿಜೆ ಸದ್ದಿಗೆ ಕುಣಿದು ಕುಪ್ಪಳಿಸಿದರು. ಸಾವಿರಾರು ಸಂಖ್ಯೆಯ ಯುವ ಸಮೂಹ ರಸ್ತೆಯುದ್ದಕ್ಕೂ ಡಿಜೆ ಸದ್ದಿಗೆ ಹುಚ್ಚೆದ್ದು ಕುಣಿಯುವ ಮೂಲಕ ಗಮನ ಸೆಳೆದ್ರೆ, ಮತ್ತೊಂದೆಡೆ, ವಿವಿಧ ವಾದ್ಯಗಳಾದ ಡೊಳ್ಳು ಕುಣಿತ, ಹೆಜ್ಜೆ‌ ಮಜಲು ಡೋಲು ಸೇರಿದಂತೆ ವಿವಿಧ ವಾದ್ಯಗಳ ಮೂಲಕ ವಿಘ್ನವಿನಾಶಕನಿಗೆ ವಿದಾಯ ಹೇಳಲಾಯಿತು. 

ಇನ್ನು ಸಾರ್ವಜನಿಕರ ಗಣೇಶೋತ್ಸವ ಮೆರವಣಿಗೆ ಹಿನ್ನೆಲೆಯಲ್ಲಿ ನಗರದಾದ್ಯಂತ ಬಿಗಿ ಪೊಲೀಸ್ ಭದ್ರತೆ ನಿಯೋಜನೆ ಮಾಡಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನಗರದಾದ್ಯಂತ ಪೊಲೀಸ್ ಬಿಗಿ ಬಂದೋಬಸ್ತ್​ ಏರ್ಪಡಿಸಲಾಗಿತ್ತು.

ಇದನ್ನೂ ಓದಿ: ಬೆಳಗಾವಿಯಲ್ಲಿ ಗಣೇಶ ಮೂರ್ತಿ ನಿಮಜ್ಜನಕ್ಕೆ ಅದ್ಧೂರಿ ಚಾಲನೆ: ಬೆಳಗಿನವರೆಗೂ ಮೆರವಣಿಗೆ

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.