ಭಯೋತ್ಪಾದಕರಿಂದ ಹತ್ಯೆಯಾದ ಕಾಶ್ಮೀರಿ ಪಂಡಿತ ಸಂಜಯ್​ ಶರ್ಮಾ ಅಂತ್ಯಸಂಸ್ಕಾರ - ಅಂತಿಮ ಸಂಸ್ಕಾರ

🎬 Watch Now: Feature Video

thumbnail

By

Published : Feb 27, 2023, 2:03 PM IST

ಕಾಶ್ಮೀರ: ಭಯೋತ್ಪಾದಕರ ದುಷ್ಕೃತ್ಯಕ್ಕೆ ಬಲಿಯಾಗಿದ್ದ ಬ್ಯಾಂಕ್​ ಸೆಕ್ಯೂರಿಟಿ ಗಾರ್ಡ್​, ಕಾಶ್ಮೀರಿ ಪಂಡಿತ ಸಂಜಯ್​ ಶರ್ಮಾ ಅವರ ಅಂತ್ಯಕ್ರಿಯೆಯನ್ನು ಇಂದು ಪುಲ್ವಾಮಾ ಜಿಲ್ಲೆಯ ಅಚಾನ್​ ಪ್ರದೇಶದಲ್ಲಿ ನೆರವೇರಿಸಲಾಯಿತು. ಸಂಜಯ್​ ಅವರ ಮೃತದೇಹವನ್ನು ಅಂತ್ಯಸಂಸ್ಕಾರ ನೆರವೇರಿಸಲು ಮನೆಯಿಂದ ಹೊರ ತಂದಾಗ ಅಲ್ಲಿ ಬಹುದೊಡ್ಡ ಸಂಖ್ಯೆಯಲ್ಲಿ ಸ್ಥಳೀಯರು ನೆರೆದಿದ್ದರು. ಈ ವೇಳೆ ಕುಟುಂಬಸ್ಥರ ಜೊತೆಗೆ ಸ್ಥಳೀಯ ಮುಸ್ಲಿಂ ಧರ್ಮಿಯರು ಕೂಡ ಹೆಚ್ಚಿನ ಸಂಖ್ಯೆಯಲ್ಲಿದ್ದರು. 

ಭಾನುವಾರ ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಅಚಾನ್​ ಪ್ರದೇಶದಲ್ಲಿ ಶಸ್ತ್ರಸಜ್ಜಿತ ಭಯೋತ್ಪಾದಕರು, ತಮ್ಮ ಮನೆಗೆ ಹೋಗುತ್ತಿದ್ದ ಕಾಶ್ಮೀರಿ ಪಂಡಿತ ಸಂಜಯ್​ ಶರ್ಮಾ ಅವರ ಮೇಲೆ ಗುಂಡಿನ ದಾಳಿ ಮಾಡಿ ಹತ್ಯೆಗೈದಿದ್ದರು. ಮನೆಯಿಂದ ಕೆಲವು ಮೀಟರ್​ಗಳಷ್ಟೇ ದೂರದಲ್ಲಿದ್ದ ಸಂಜಯ್​ ಶರ್ಮಾ ಅವರನ್ನು ಭಯೋತ್ಪಾದಕರು ಹತ್ಯೆಗೈದಿದ್ದರು. ಗುಂಡಿನ ದಾಳಿಯಾದ ತಕ್ಷಣವೇ ಅವರನ್ನು ಪುಲ್ವಾಮಾ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ವೈದ್ಯರು ಸಂಜಯ್​ ಶರ್ಮಾ ಮೃತಪಟ್ಟಿರುವುದಾಗಿ ಘೋಷಿಸಿದ್ದರು.

ಕಾಶ್ಮೀರಿ ಪಂಡಿತ್​ ಸಂಜಯ್​ ಶರ್ಮಾ ಹತ್ಯೆ ಬೆನ್ನಲ್ಲೇ ಕುಟುಂಬಸ್ಥರು, ಸ್ಥಳೀಯರು ಹತ್ಯೆಯನ್ನು ಖಂಡಿಸಿ ಉಗ್ರರ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಸಂಜಯ್​ ಶರ್ಮಾ ಸಾವಿಗೆ ರಾಜಕೀಯ ಪಕ್ಷಗಳು ಸಂತಾಪ ಸೂಚಿಸಿದ್ದರು. ಈ ಭಯೋತ್ಪಾದಕ ಘಟನೆ ಬಗ್ಗೆ ತನಿಖೆ ಆರಂಭಿಸಲಾಗಿದ್ದು, ಹತ್ಯೆಯಲ್ಲಿ ಭಾಗಿಯಾಗಿರುವ ಉಗ್ರರ ಹುಡುಕಾಟ ಕಾರ್ಯಾಚರಣೆ ತೀವ್ರಗತಿಯಲ್ಲಿ ಸಾಗುತ್ತಿದೆ ಎಂದು ದಕ್ಷಿಣ ಕಾಶ್ಮೀರ ಡಿಐಜಿ ರಯೀಸ್​ ಬಟ್​ ಭಾನುವಾರ ತಿಳಿಸಿದ್ದರು. ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಪುಲ್ವಾಮಾದಲ್ಲಿ ಕಾಶ್ಮೀರಿ ಪಂಡಿತ ಸಂಜಯ್ ಕುಮಾರ್ ಶರ್ಮಾ ಹತ್ಯೆಯನ್ನು ಖಂಡಿಸಿದ್ದು, ಸಂತಾಪ ಸೂಚಿಸಿದ್ದಾರೆ.

ಇದನ್ನೂ ನೋಡಿ: ಕಾಶ್ಮೀರಿ ಪಂಡಿತ ಸಂಜಯ್​ ಶರ್ಮಾ ಹತ್ಯೆಗೆ ಆಕ್ರೋಶ: ಸ್ಥಳೀಯರಿಂದ ಉಗ್ರರ ವಿರುದ್ಧ ಪ್ರತಿಭಟನೆ

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.