ಕೋಲಾರದ ಶತಶೃಂಗ ಬೆಟ್ಟಗಳ ಸಾಲಿನ ಮಧ್ಯದಲ್ಲಿ ಯೋಗ ದಿನಾಚರಣೆ - ವಿಡಿಯೋ - ಕೋಲಾರದಲ್ಲಿ ಯೋಗ ದಿನಾಚರಣೆ
🎬 Watch Now: Feature Video
ಕೋಲಾರ: ವಿಶ್ವ ಯೋಗ ದಿನಾಚರಣೆಯನ್ನು ಜಿಲ್ಲೆಯಲ್ಲಿ ನಗರಕ್ಕೆ ಹೊಂದಿಕೊಂಡಿರುವ ಶತಶೃಂಗ ಬೆಟ್ಟಗಳ ಸಾಲಿನಲ್ಲಿ ಮೈದಾನದಂತಹ ಪ್ರದೇಶದಲ್ಲಿ ಅದ್ಧೂರಿಯಾಗಿ ಆಚರಿಸಲಾಯಿತು. ಸಾವಿರಾರು ಸಂಖ್ಯೆಯಲ್ಲಿ ಶಾಲಾ ಮಕ್ಕಳು, ಸ್ವಯಂ ಸೇವಕರು ಭಾಗವಹಿಸಿ ಗಮನ ಸೆಳೆದರು. ಬೆಟ್ಟಗಳು, ಹಸಿರು ಗಿಡಮರಗಳ ಮಧ್ಯೆ ಯೋಗಾಸನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ತೇರಹಳ್ಳಿ ಬೆಟ್ಟಗಳ ಸಾಲಿನಲ್ಲಿ ಈ ಯೋಗ ದಿನಾಚರಣೆಗೆ ಕಳೆದ 15 ದಿನಗಳಿಂದ ತಯಾರಿ ನಡೆಸಲಾಗಿತ್ತು. ಶಾಲಾ ವಿದ್ಯಾರ್ಥಿಗಳು, ಪೊಲೀಸರು, ಎನ್‌ಸಿಸಿ, ಎನ್ಎಸ್ಎಸ್, ಯೋಗ ತಂಡಗಳು, ಮಾಜಿ ಯೋಧರು ಸೇರಿದಂತೆ ಅನೇಕರು ಭಾಗವಹಿಸಿದ್ದರು. ಸಂಸದ ಮುನಿಸ್ವಾಮಿ, ವಿಧಾನಪರಿಷತ್ ಸದಸ್ಯ ಗೋವಿಂದರಾಜು, ವೈ.ಎ. ನಾರಾಯಣಸ್ವಾಮಿ, ಮಾಜಿ ಶಾಸಕ ವರ್ತೂರು ಪ್ರಕಾಶ್, ಕೋಲಾರ ಜಿಲ್ಲಾಧಿಕಾರಿ, ಎಸ್ಪಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.
Last Updated : Feb 3, 2023, 8:24 PM IST