ಉಪ್ಪಿನಂಗಡಿ: ಬರೀ ಕೈಯಲ್ಲಿ ಬೃಹತ್ ಕಾಳಿಂಗ ಸರ್ಪ ಹಿಡಿದ ಉರಗತಜ್ಞ - ವಿಡಿಯೋ - ಉರಗತಜ್ಞ ಝಕರಿಯಾ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/28-11-2023/640-480-20133089-thumbnail-16x9-sanjuuu.jpg)
![ETV Bharat Karnataka Team](https://etvbharatimages.akamaized.net/etvbharat/prod-images/authors/karnataka-1716535795.jpeg)
Published : Nov 28, 2023, 4:09 PM IST
ಉಪ್ಪಿನಂಗಡಿ (ದಕ್ಷಿಣ ಕನ್ನಡ): ನೆಲ್ಯಾಡಿಯ ಸೈಂಟ್ ಜೋಸೆಫ್ ಮಲಂಕರ ಕ್ಯಾಥೋಲಿಕ್ ಚರ್ಚ್ ಪರಿಸರದಲ್ಲಿ ಸುತ್ತಾಡಿಕೊಂಡಿದ್ದ ಕಾಳಿಂಗ ಸರ್ಪವನ್ನು ಬರೀ ಕೈಯಲ್ಲಿ ಹಿಡಿದು ಉರಗತಜ್ಞರೋರ್ವರು ರಕ್ಷಣೆ ಮಾಡಿದ್ದಾರೆ.
ಪ್ರಸಿದ್ಧ ಉರಗ ತಜ್ಞ ಉಪ್ಪಿನಂಗಡಿಯ ಕೆ. ಝಕಾರಿಯ ಎಂಬವರು ಕಾಳಿಂಗ ಸರ್ಪವನ್ನು ಹಿಡಿದವರು. ಸಾಧಾರಣವಾಗಿ ಉರಗತಜ್ಞರು ಹಾವು ಹಿಡಿಯುವಾಗ ಬಳಸುವ ಸ್ಟಿಕ್, ಅಥವಾ ಕಬ್ಬಿಣ ಸರಳಿನಂತ ಯಾವುದೇ ಉಪಕರಣಗಳನ್ನು ಬಳಸದೆ ಬರಿ ಕೈಯಲ್ಲೇ ಬೃಹತ್ ಕಾಳಿಂಗ ಸರ್ಪವನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟು ಬಂದಿದ್ದಾರೆ.
ಕೆಲವು ದಿನಗಳಿಂದ ಸುಮಾರು 12 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪವೊಂದು, ನೆಲ್ಯಾಡಿಯ ಚರ್ಚ್ ಪರಿಸರದಲ್ಲಿ ನಿರಂತರವಾಗಿ ಸಂಚಾರ ಮಾಡಿಕೊಂಡಿತ್ತು. ಇದೀಗ ಇದನ್ನು ಹಿಡಿದು ಕಾಡಿಗೆ ಬಿಟ್ಟು ಬಂದಿರುವುದರಿಂದ ಈ ಪ್ರದೇಶದ ಜನರು ನಿಟ್ಟುಸಿರು ಬಿಡುವಂತಾಗಿದೆ. ಹೀಗಾಗಿ ಇದರಿಂದ ಸಂತಸಗೊಂಡಿರುವ ಇಲ್ಲಿನ ಸ್ಥಳೀಯರು ಕಾಳಿಂಗ ಸರ್ಪವನ್ನು ಹಿಡಿದ ಉರಗತಜ್ಞ ಝಕರಿಯಾ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಕಾಳಿಂಗ ಸರ್ಪ ಸೆರೆ : ಬಂಟ್ವಾಳ ತಾಲೂಕಿನ ಪಂಜಿಕಲ್ಲು ಪ್ರದೇಶದ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿದ್ದ ಕಾಳಿಂಗ ಸರ್ಪವನ್ನು ವಗ್ಗದ ಸ್ನೇಕ್ ಕಿರಣ್ ಎಂಬವರು ಹಿಡಿದು ಸುರಕ್ಷಿತ ಸ್ಥಳದಲ್ಲಿ (ಅಕ್ಟೋಬರ್ -2-2023) ಬಿಟ್ಟಿದ್ದರು.
ಇದನ್ನೂ ಓದಿ : ಬಂಟ್ವಾಳ: ಭೀತಿ ಹುಟ್ಟಿಸಿದ 12 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ