ಪೇಪರ್ನಲ್ಲಿ ಅರಳಿದ ಫ್ಯಾಷನ್ ಉಡುಗೆ: ಪುಟಾಣಿಗಳ ರ‍್ಯಾಂಪ್ ವಾಕ್ - ಮಕ್ಕಳಿಗೆ ಸೃಜನಾತ್ಮಕ ಚಟುವಟಿಕೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/18-07-2023/640-480-19031625-thumbnail-16x9-sanjuuu.jpg)
ಗಂಗಾವತಿ (ಕೊಪ್ಪಳ): ಎಳೆಯ ಮಕ್ಕಳು ಹೇಗಿದ್ದರೂ ಚಂದ, ಪುಟಾಣಿ ಮಕ್ಕಳಿಗೆ ಯಾವುದೇ ವಿನ್ಯಾಸದ ಬಟ್ಟೆ ಹಾಕಿದರೂ ಒಪ್ಪುತ್ತವೆ ಎಂಬುವುದಕ್ಕೆ ಇಲ್ಲಿನ ಜಯನಗರದ ಸೆಂಟ್ಪಾಲ್ ಶಾಲೆಯಲ್ಲಿ ನಡೆದ ಫ್ಯಾಷನ್ ಶೋದಲ್ಲಿ ಸಾಬೀತಾಯಿತು. ಮಕ್ಕಳಿಗೆ ಸೃಜನಾತ್ಮಕ ಚಟುವಟಿಕೆಯನ್ನು ಪ್ರೇರೆಪಿಸುವ ಭಾಗವಾಗಿ ಆಯೋಜಿಸಲಾಗಿದ್ದ ಫ್ಯಾಷನ್ ಶೋದಲ್ಲಿ ಶಾಲೆಯ ಯುಕೆಜಿ, ಒಂದು ಮತ್ತು ಎರಡನೇ ತರಗತಿಯ ನೂರಾರು ಮಕ್ಕಳು ಭಾಗಿಯಾಗಿದ್ದವು.
ಕೇವಲ ನ್ಯೂಸ್ ಪೇಪರ್ನಲ್ಲಿ ಅರಳಿದ ನಾನಾ ಉಡುಗೆಗಳಲ್ಲಿ ಮಕ್ಕಳು ಮಿಂಚಿದರು. ಕೆಲ ಮಕ್ಕಳು ರ‍್ಯಾಂಪ್ ಮೇಲೆ ಕ್ಯಾಟ್ ವಾಕ್ ಮಾಡಿಕೊಂಡು ಬಂದು ಪೇಪರ್ ಪೋಷಾಕುಗಳನ್ನು ಪ್ರದರ್ಶಿಸಿದ್ದು, ಜನರ ಗಮನ ಸೆಳೆಯಿತು. ಫ್ಯಾಷನ್ ಶೋದಲ್ಲಿ ದೇಶಿಯ ಮಾದರಿಯ ನಾನಾ ವಿಶೇಷ ಮತ್ತು ವಿನ್ಯಾಸದ ಉಡುಗೆ, ಪಾಶ್ಚಿಮಾತ್ಯ ಶೈಲಿಗಳು ಮೇಳೈಸಿದವು. ಮುಖ್ಯವಾಗಿ ಎಲ್ಲ ಪೋಷಾಕುಗಳು ಕೇವಲ ವೃತ್ತ ಪತ್ರಿಕೆಗಳಿಂದಲೇ ಮಾಡಲಾಗಿತ್ತು ಎಂಬುವುದು ವಿಶೇಷ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಶಾಲೆಯ ಶಿಕ್ಷಕಿ ಸುಹಾನ, ಮಕ್ಕಳಲ್ಲಿ ಸೂಪ್ತವಾಗಿರುವ ರಚನಾತ್ಮಕ ಮತ್ತು ಸೃಜನಾತ್ಮಕ ಕಲೆಯನ್ನು ಪ್ರೇರೇಪಿಸುವ ಉದ್ದೇಶಕ್ಕೆ ಈ ಚಟುವಟಿಕೆ ಹಮ್ಮಿಕೊಳ್ಳಲಾಗಿತ್ತು ಎಂದರು.
ಇದನ್ನೂ ಓದಿ: ರ‍್ಯಾಂಪ್ ಮೇಲೆ ಹೆಜ್ಜೆ ಹಾಕಿದ ಪುಟಾಣಿಗಳು.. ಕಣ್ಮನ ಸೆಳೆದ ಫ್ಯಾಷನ್ ಶೋ