ಪೊಲೀಸರು ರಕ್ಷಣೆ ನೀಡದಿದ್ದರೆ ಇಷ್ಟೊತ್ತಿಗೆ ಕೊಲೆಯಾಗ್ತಿದ್ದೆ: ಕೆಜಿಎಫ್ ಬಾಬು - ಸಾಮಾಜಿಕ ಕಾರ್ಯಕರ್ತ ಆಲಂಪಾಷಾ
🎬 Watch Now: Feature Video
ಬೆಂಗಳೂರು : ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಚಿಕ್ಕಪೇಟೆ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಕೆಜಿಎಫ್ ಬಾಬು ಇದೀಗ ಕ್ಷೇತ್ರದ ಮಾಜಿ ಶಾಸಕರ ಮೇಲೆ ಗರಂ ಆಗಿದ್ದಾರೆ. ಆರ್.ವಿ.ದೇವರಾಜ್ ಮತ್ತು ಪುತ್ರ ಯುವರಾಜ್ ನನಗೆ ಕೆಲಸ ಮಾಡಲು ಬಿಡುತ್ತಿಲ್ಲ, ಇಬ್ಬರು ನನ್ನನ್ನು ಕೊಲೆ ಮಾಡಿಸಲು ಸುಪಾರಿ ನೀಡಿದ್ದು, ಪೊಲೀಸರಿಂದ ನಾನು ಬದುಕಿದ್ದೇನೆ ಅಷ್ಟೇ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಚಿಕ್ಕಪೇಟೆ ಮತದಾರರಿಗೆ ಸುಮಾರು 600 ಮನೆ ಕಟ್ಟಿಸಿಕೊಡುತ್ತಿರುವ ಬಾಬು, ವಕ್ಫ್ ಬೋರ್ಡ್ ಆಸ್ತಿ ದುರುಪಯೋಗ ಮಾಡಿದ್ದಾರೆಂದು ಅಲಂ ಪಾಷ ಎಂಬವರು ದೂರು ನೀಡಿದ್ದಾರೆ. ಇದಕ್ಕೆ ಪ್ರತಿಯಾಗಿ ಚಿಕ್ಕಪೇಟೆಯ ಕೆಲವು ನಾಗರಿಕರು, ಅಲಂ ಪಾಷ ಮನೆ ಕಟ್ಟಿಕೊಳ್ಳಲು ತೊಂದರೆ ಕೊಡಬಾರದು ಅಂದ್ರೆ ಹಣ ಕೊಡಬೇಕು ಎಂದು ಧಮ್ಕಿ ಹಾಕಿದ್ದಾರೆಂದು ದೂರು ನೀಡಿದ್ದಾರೆ. ಈ ಕುಮ್ಮಕ್ಕಿಗೆ ದೇವರಾಜ್, ಯುವರಾಜ್ ಕಾರಣ. ಇವರನ್ನು ಎಫ್ಐಆರ್ನಲ್ಲಿ ಸೇರಿಸುವಂತೆ ಕೆಜಿಎಫ್ ಬಾಬು ಒತ್ತಾಯಿಸಿದ್ದಾರೆ. ಇಂದು ನೂರಾರು ಕಾರ್ಯಕರ್ತರೊಂದಿಗೆ ಬಂದು ಪೊಲೀಸ್ ಕಮಿಷನರ್ಗೆ ಅವರು ಈ ಕುರಿತು ಮನವಿ ಸಲ್ಲಿಸಿದ್ದಾರೆ.
ಚಿಕ್ಕಪೇಟೆಯ ಬಡಮಕನ್ ಸ್ಥಳವು ವಕ್ಫ್ ಬೋರ್ಡ್ಗೆ ಸೇರಿದ್ದು, ಬಡವರಿಗೆ ದಾನ ಮಾಡಲಾಗಿದೆ. ಆ ಸ್ಥಳದಲ್ಲಿ ಬಡವರಿಗೋಸ್ಕರ 3,000 ಮನೆಗಳನ್ನು ಕಟ್ಟಿಸಿಕೊಡುವ ಗುರಿ ಇದೆ. ಈಗಾಗಲೇ 600 ಮನೆಗಳನ್ನು ನಿರ್ಮಿಸಲಾಗಿದೆ. ಈ ಮಧ್ಯೆ ಮಾಜಿ ಶಾಸಕ ದೇವರಾಜ್ ಪ್ರಭಾವದಿಂದ ಸಾಮಾಜಿಕ ಕಾರ್ಯಕರ್ತ ಆಲಂ ಪಾಷಾ ಸುಖಾಸುಮ್ಮನೆ ಆರೋಪ ಮಾಡುತ್ತಿದ್ದಾರೆ. ರಾಜಕೀಯಕ್ಕೆ ನನ್ನನ್ನು ಬರದಂತೆ ತಡೆಲು ಕೊಲೆ ಮಾಡಿಸಲು ರೌಡಿಗಳಿಗೆ ಸುಪಾರಿ ನೀಡಿದ್ದಾರೆ ಎಂದು ಆರೋಪಿಸಿದರು.
ಇದನ್ನೂ ಓದಿ: ವಕ್ಫ್ ಮಂಡಳಿಯ ಜಾಗ ಅತಿಕ್ರಮ ಸ್ವಾಧೀನ ಆರೋಪ; ವಿಲ್ಸನ್ ಗಾರ್ಡನ್ ಠಾಣೆ ಮುಂದೆ ಕೆಜಿಎಫ್ ಬಾಬು ಬೆಂಬಲಿಗರ ಪ್ರತಿಭಟನೆ