ಮಂತ್ರಾಲಯ: ತುಂಗಭದ್ರಾ ನದಿಯ ದಡದಲ್ಲಿ ವೈಭವದಿಂದ ಜರುಗಿದ ರಾಯರ ತುಂಗಾರತಿ - ದೀಪೋತ್ಸವ ಮತ್ತು ತುಂಗಾರತಿ ಕಾರ್ಯಕ್ರಮ
🎬 Watch Now: Feature Video
Published : Nov 28, 2023, 12:32 PM IST
ರಾಯಚೂರು: ಜಿಲ್ಲೆಯ ಗಡಿ ಭಾಗದಲ್ಲಿ ಇರುವ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಕಾರ್ತಿಕ ಮಾಸದ ಹಿನ್ನೆಲೆಯಲ್ಲಿ ದೀಪೋತ್ಸವ ಮತ್ತು ತುಂಗಾರತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಹೀಗಾಗಿ ತುಂಗಭದ್ರಾ ನದಿಯ ದಡದಲ್ಲಿ ತುಂಗಾರತಿ ಕಾರ್ಯಕ್ರಮವನ್ನು ನೆರವೇರಿಸಲಾಯಿತು.
ಶ್ರೀಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರ ಸಮ್ಮುಖದಲ್ಲಿ ತುಂಗಾರತಿ ಸಮಾರಂಭದಲ್ಲಿ ಆರಂಭದಲ್ಲಿ ಮಠದಿಂದ ತುಂಗಭದ್ರಾ ನದಿಯಿಂದ ವಾದ್ಯಗಳ ನಾದದೊಂದಿಗೆ ಪ್ರಹ್ಲಾದ ರಾಜರ ಪಲ್ಲಕ್ಕಿ ತೆಗೆದುಕೊಂಡು ಹೋಗಲಾಯಿತು. ಬಳಿಕ ನದಿಯಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಶ್ರೀಸುಬುಧೇಂದ್ರ ತೀರ್ಥರು ನದಿಯಲ್ಲಿ ಗಂಗೆ ಪೂಜೆ ಹಾಗೂ ಮಂಗಳಾರತಿ ನೆರವೇರಿಸಿದರು. ಇದೇ ವೇಳೆ ಶ್ರೀಗಳು ಅನುಗ್ರಹ ಸಂದೇಶದ ಮೂಲಕ ಭಕ್ತರಿಗೆ ಆಶೀರ್ವಚನ ನೀಡಿದರು.
ಈ ಸಂದರ್ಭವನ್ನು ಕಣ್ತುಂಬಿಕೊಳ್ಳಲು ಕರ್ನಾಟಕ, ಆಂಧ್ರ ಪ್ರದೇಶ ಸೇರಿದಂತೆ ನಾನಾ ಕಡೆಯಿಂದ ಭಕ್ತರು ಆಗಮಿಸಿದ್ದರು. ಈ ಸಂದರ್ಭದಲ್ಲಿ ಶ್ರೀಮಠದ ವ್ಯವಸ್ಥಾಪಕ ಎಸ್.ಕೆ ಶ್ರೀನಿವಾಸರಾವ್, ಸಹಾಯಕ ವ್ಯವಸ್ಥಾಪಕ ಐ.ಪಿ ನರಸಿಂಹಾಚಾರ್, ಆಡಳಿತಾಧಿಕಾರಿ ವೆಂಕಟೇಶ ಜೋಷಿ, ವಿದ್ವಾನ್ ಡಾ. ಎನ್. ವಾದಿರಾಜಾಚಾರ್ ಹಾಗೂ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.
ಓದಿ: ಗೃಹಲಕ್ಷ್ಮೀ ಯೋಜನೆ: ಚಾಮುಂಡೇಶ್ವರಿ ತಾಯಿಗೆ ಐದು ವರ್ಷದ ಹಣ ಅರ್ಪಣೆ