ಬಜೆಟ್ ನಂತರ ಯಾರ ಕಿವಿಯಲ್ಲೂ ಹೂ ಇಲ್ಲ.. ಬೊಮ್ಮಾಯಿ ಟಾಂಗ್! - ETV Bharath Kannada news
🎬 Watch Now: Feature Video
ಬೆಂಗಳೂರು: ಕಿವಿಗೆ ಹೂ ಇಟ್ಟು ಕೊಂಡಿದ್ದವರಿಗೆ ಬಜೆಟ್ ಮಂಡಿಸಿದ ಕೊನೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಟಾಂಗ್ ಕೊಟ್ಟರು. ಬಜೆಟ್ ಮಂಡನೆಗೆ ಮುಂದಾದಾಗ ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಕಿವಿಯಲ್ಲಿ ಹೂ ಇಟ್ಟು ಕೊಂಡು ಮುಂಗಡ ಪತ್ರಕ್ಕೆ ಗೇಲಿ ಮಾಡಿದ್ದರು. ಈ ವೇಳೆ, ಕಾಂಗ್ರೆಸ್ ಮತ್ತು ಬಿಜೆಪಿಗ ನಡುವೆ ಸದನದಲ್ಲಿ ಗಲಾಟೆ ಆಯಿತು.
ಮುಂಗಡ ಪತ್ರ ಮಂಡನೆ ಆದ ನಂತರ ಕೊನೆಯಲ್ಲಿ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಸೋಮವಾರಕ್ಕೆ ಅಧಿವೇಶನ ಮುಂದುಡಿರುವುದಾಗಿ ಘೋಷಿಸಿದ ನಂತರ ಬೊಮ್ಮಾಯಿ ಅವರು, ಆರಂಭದಲ್ಲಿ ಕಿವಿಗೆ ಹೂ ಇಟ್ಟುಕೊಂಡಿದ್ದವರು, ಬಜೆಟ್ ಭಾಷಣ ಓದಿದ ನಂತರ ಅವರ ಕಿವಿಯಲ್ಲಿ ಹೂವೇ ಕಾಣುತ್ತಿಲ್ಲ ಎಂದು ಹೇಳುವ ಮೂಲಕ ಟಾಂಗ್ ಕೊಟ್ಟರು.
ಇದನ್ನೂ ಓದಿ: ಕಿವಿಗೆ ಹೂವು ಮೂಡಿದು ಬಂದ ಕಾಂಗ್ರೆಸ್ ಸದಸ್ಯರು.. ಬಜೆಟ್ ವೇಳೆ ಆಕ್ರೋಶ ವ್ಯಕ್ತಪಡಿಸಿದ ಕೈ ನಾಯಕರು