ಪ್ರಚಂಡ ಕಾಳಗದಿಂದ ಹತ್ತಾರು ಪ್ರಶಸ್ತಿ ಗೆದ್ದು ಹೆಸರುವಾಸಿಯಾಗಿದ್ದ 'ಕಮಲಾಪೂರ ಜಂಗ್ಲಿ' ಟಗರು ಸಾವು - junglee goat death
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/04-07-2023/640-480-18908298-thumbnail-16x9-vny.jpg)
ಧಾರವಾಡ: ಟಗರು ಕಾಳಗಕ್ಕೆ ಹೆಸರುವಾಸಿಯಾಗಿದ್ದ ಧಾರವಾಡದ ಕಮಲಾಪೂರ ಜಂಗ್ಲಿ ಟಗರು ಅನಾರೋಗ್ಯದಿಂದ ಅಸುನೀಗಿದೆ. ಮನುಷ್ಯರ ರೀತಿಯಲ್ಲಿಯೇ ಕುಟುಂಬಸ್ಥರು ಅಂತ್ಯಕ್ರಿಯೆ ಮಾಡಿದ್ದಾರೆ. ಮಂಜುನಾಥ ಅಮ್ಮಿನಬಾವಿ ಎಂಬವರು ಹುಬ್ಬಳ್ಳಿಯಿಂದ 2 ಲಕ್ಷ ರೂಪಾಯಿ ನೀಡಿ ಖರೀದಿಸಿ ತಮ್ಮ ಕುಟುಂಬ ಸದಸ್ಯರಂತೆ ಪಾಲನೆ ಮಾಡಿದ್ದರು. ಆಗಾಗ್ಗೆ ಕಾಳಗಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಬಹುತೇಕ ಎಲ್ಲ ಕಾಳಗಗಳಲ್ಲೂ ಪ್ರಥಮ ಬಹುಮಾನ ಪಡೆದುಕೊಂಡು ಬರುತ್ತಿತ್ತು ಎಂದು ಹೇಳಿದ ಕುಟುಂಬಸ್ಥರು ಸಾವಿಗೆ ಕಂಬನಿ ಮಿಡಿದರು.
ಏಳು ವರ್ಷದಿಂದ ಕುಟುಂಬದ ಸದಸ್ಯರಂತೆ ನೋಡಿಕೊಂಡಿದ್ದರು. ಇದೀಗ ಅಚ್ಚುಮೆಚ್ಚಿನ ಟಗರಿನ ಸಾವು ಕುಟುಂಬಸ್ಥರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಜನಪ್ರಿಯತೆ ಗಳಿಸಿದ್ದ ಟಗರು 30ಕ್ಕೂ ಹೆಚ್ಚು ಕಾಳಗದಲ್ಲಿ ಬಹುಮಾನ ಗೆದ್ದುಕೊಂಡಿತ್ತು. ತಾನು ಗೆದ್ದಿರುವ ಕಪ್ಗಳ ಮಧ್ಯೆ ಜಂಗ್ಲಿ ಇದೀಗ ಮೌನವಾಗಿ ಮಲಗಿದೆ. ಅಕ್ಕಪಕ್ಕದ ಜನರು ಅಂತಿಮ ದರ್ಶನ ಪಡೆದು ಕಣ್ಣೀರು ಹಾಕುತ್ತಿದ್ದ ದೃಶ್ಯ ಕಂಡುಬಂತು. ಟಗರಿಗೆ ಫುಡ್ ಪಾಯ್ಸನ್ ಅಥವಾ ಹೃದಯಾಘಾತ ಆಗಿರಬಹುದು ಎಂದು ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಎತ್ತಿಗೆ ಶಾಸ್ತ್ರೋಕ್ತ ಅಂತ್ಯಕ್ರಿಯೆ ನೆರವೇರಿಸಿದ ರೈತ- ವಿಡಿಯೋ