ಚಿಕ್ಕಮಗಳೂರಲ್ಲಿ ವರುಣಾರ್ಭಟ: ಕಲ್ಲತಗಿರಿ ಫಾಲ್ಸ್ ಫುಲ್ - ತುಂಬಿದ ಕಲ್ಲತಗಿರಿ ಜಲಪಾತ
🎬 Watch Now: Feature Video
ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಳೆದ ಹತ್ತು ದಿನಗಳಿಂದ ಎಡಬಿಡದೇ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಜಿಲ್ಲೆಯಲ್ಲಿ ನೂರಾರು ಫಾಲ್ಸ್ಗಳು ಹುಟ್ಟುಕೊಂಡಿವೆ. ಹಾಗೆಯೇ ತರೀಕೆರೆ ತಾಲೂಕಿನ ಕಲ್ಲತ್ತಗಿರಿ ಜಲಪಾತ ತುಂಬಿ ಹರಿಯುತ್ತಿದೆ. ದೂರದಲ್ಲೇ ನಿಂತು ಪ್ರವಾಸಿಗರು ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬರುತ್ತಿದೆ. ಕೆಮ್ಮಣ್ಣಗುಂಡಿ ಭಾಗದಲ್ಲಿ ಸುರಿಯುತ್ತಿರುವ ಮಳೆಯಿಂದ ಜಲಪಾತಕ್ಕೆ ನೀರು ಹೆಚ್ಚಾಗಿದ್ದು, ಜಲಪಾತದ ಹತ್ತಿರ ಹೋಗದಂತೆ ಪ್ರವಾಸಿಗರಿಗೆ ಆಡಳಿತ ಮಂಡಳಿ ಎಚ್ಚರಿಕೆ ನೀಡಿದೆ.
Last Updated : Feb 3, 2023, 8:24 PM IST