ಬೆಂಗಳೂರಿನಲ್ಲಿ ಮಧ್ಯರಾತ್ರಿ ಸರಣಿ ಅಪಘಾತ... ಅಪಾಯದಿಂದ ಸವಾರರು ಪಾರು! - ರೆನಾಲ್ಟ್ ಡಸ್ಟರ್
🎬 Watch Now: Feature Video
ಬೆಂಗಳೂರು: ಜೆಪಿ ನಗರ ಅಂಡರ್ ಪಾಸ್ನಲ್ಲಿ ಮೂರು ವಾಹನಗಳಿಗೆ ಅಪಘಾತವಾಗಿರುವ ಘಟನೆ ನಡೆದಿದೆ. ವೆಗಾಸಿಟಿ ಕಡೆಯಿಂದ ಜೆಪಿ ನಗರ ಮೆಟ್ರೋ ಸ್ಟೇಷನ್ ಕಡೆಗೆ ಅತೀ ವೇಗದಲ್ಲಿ ಸ್ಕೋಡಾ ಕಾರು ಬರುತ್ತಿತ್ತು. ಕಾರಿನಲ್ಲಿ ಇಬ್ಬರು ಯುವಕರು ಮತ್ತು ಇಬ್ಬರು ಯುವತಿಯರು ಇದ್ದರು. ಅತಿವೇಗದಲ್ಲಿ ಕಾರು ಚಲಾಯಿಸುತ್ತಿದ್ದ ಸ್ಕೋಡಾ ಕಾರು ಚಾಲಕ ನಿಯಂತ್ರಣ ತಪ್ಪಿ ಮೊದಲು ಆಟೋಗೆ ಡಿಕ್ಕಿ ಹೊಡೆದಿದ್ದಾನೆ. ಆಟೋ ಡಿಕ್ಕಿಯಾಗಿ ಮತ್ತೆ ಸ್ಕೋಡಾ ಕಾರು ಡಿವೈಡರ್ಗೆ ಡಿಕ್ಕಿ ಹೊಡೆದಿದೆ.
ಇಲ್ಲಿಗೆ ನಿಲ್ಲದ ಅಪಘಾತ ನಂತರ ಪಕ್ಕದಲ್ಲಿ ಬರುತ್ತಿದ್ದ ರೆನಾಲ್ಟ್ ಡಸ್ಟರ್ ಕಾರಿಗೆ ಗುದ್ದಿದೆ. ಕಾರು ಗುದ್ದಿದ ರಭಸಕ್ಕೆ ಡಸ್ಟರ್ ಪಲ್ಟಿಯಾಗಿದೆ. ಅದೃಷ್ಟವಶಾತ್ ಈ ಅಪಘಾತದಲ್ಲಿ ಆಟೋ ಚಾಲಕ ಹಾಗೂ ಡಸ್ಟರ್ ಕಾರು ಚಾಲಕ ಸಣ್ಣಪುಟ್ಟ ಗಾಯಗೊಂಡಿದ್ದು ಪ್ರಾಣಪಾಯದಿಂದ ಪಾರಾಗಿದ್ದಾರೆ. ಜೊತೆಗೆ ಡಿಕ್ಕಿ ಹೊಡೆದ ಸ್ಕೋಡಾ ಕಾರಿನಲ್ಲಿದ್ದ ಮಂದಿ ಸಣ್ಣ ಪುಟ್ಟ ಗಾಯಗಳಿಂದ ಬಚಾವ್ ಆಗಿದ್ದಾರೆ. ಸದ್ಯ ಘಟನೆ ಕುರಿತು ಜಯನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಫೋಟೋ ತೆಗೆಯಲು ಕಾಡಿನೊಳಗೆ ಹೋದ ಯುವಕನ ಬೆನ್ನಟ್ಟಿದ ಆನೆ: ವಿಡಿಯೋ