JP Nadda.. ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ.. ವಿಡಿಯೋ - ಲೋಕಸಭೆ ಚುನಾವಣೆಯ ಸಿದ್ಧತೆ
🎬 Watch Now: Feature Video
ತಿರುಪತಿ (ಆಂಧ್ರ ಪ್ರದೇಶ): ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಶನಿವಾರ ಆಂಧ್ರ ಪ್ರದೇಶದ ಪ್ರಸಿದ್ಧ ತಿರುಪತಿ ತಿರುಮಲಕ್ಕೆ ಭೇಟಿ ನೀಡಿದರು. ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದು ನಡ್ಡಾ ಪ್ರಾರ್ಥನೆ ಸಲ್ಲಿಸಿದರು. ಟಿಟಿಡಿ ಅಧಿಕಾರಿಗಳು ನಡ್ಡಾ ಅವರನ್ನು ಸ್ವಾಗತಿಸಿ, ತೀರ್ಥಪ್ರಸಾದಗಳನ್ನು ವಿತರಿಸಿದರು.
ನಡ್ಡಾ ಅವರಿಗೆ ರಾಜ್ಯ ಬಿಜೆಪಿ ಅಧ್ಯಕ್ಷ ಸೋಮು ವೀರರಾಜು, ಮಾಜಿ ಮುಖ್ಯಮಂತ್ರಿ ನಲ್ಲಾರಿ ಕಿರಣ್ ಕುಮಾರ್ ರೆಡ್ಡಿ, ಮುಖಂಡರಾದ ರಮೇಶ್, ಸೃಜನ ಚೌದರಿ ಸೇರಿ ಹಲವರು ನಾಯಕರು ಸಾಥ್ ನೀಡಿದರು. ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಿನ ನಂತರ ಮೊದಲ ಬಾರಿಗೆ ದಕ್ಷಿಣ ರಾಜ್ಯಕ್ಕೆ ನಡ್ಡಾ ಭೇಟಿ ಕೊಟ್ಟಿದ್ದಾರೆ. ಲೋಕಸಭೆ ಚುನಾವಣೆಯ ಸಿದ್ಧತೆಯ ದೃಷ್ಟಿಯಿಂದ ಈ ಭೇಟಿಯನ್ನು ಅತ್ಯಂತ ಪ್ರಮುಖವೆಂದು ಪರಿಗಣಿಸಲಾಗಿದೆ.
ಆಂಧ್ರ ಪ್ರದೇಶಕ್ಕೆ ತಮ್ಮ ಒಂದು ದಿನದ ಪ್ರವಾಸ ಸಂದರ್ಭದಲ್ಲಿ ನಡ್ಡಾ ಲೋಕಸಭೆ ಚುನಾವಣೆಯ ಸಿದ್ಧತೆಗಳ ಕುರಿತ ಪ್ರಮುಖ ಮಾರ್ಗಸೂಚಿಗಳನ್ನು ಪಕ್ಷದ ರಾಜ್ಯ ಘಟಕದ ಮುಖಂಡರು ಮತ್ತು ಕಾರ್ಯಕರ್ತರನ್ನು ತಿಳಿಸಲಿದ್ದಾರೆ. ತಿರುಪತಿಯಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನೂ ಏರ್ಪಡಿಸಲಾಗಿದೆ.
ಇದನ್ನೂ ಓದಿ: ವಿಡಿಯೋ: ತಿರುಪತಿ ತಿಮ್ಮಪ್ಪನ ದರ್ಶನ ಪಡೆದ 'ಆದಿಪುರುಷ್' ಪ್ರಭಾಸ್