ಕೇರಳ ಸಿಎಂ ಭೇಟಿಯಾದ ಜಾರ್ಖಂಡ್ ಮುಖ್ಯಮಂತ್ರಿ.. ಕಾರಣ? - ಪ್ರವಾಸೋದ್ಯಮ ಸಹಕಾರ
🎬 Watch Now: Feature Video

ತಿರುವನಂತಪುರಂ(ಕೇರಳ): ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೋರನ್ ಇಂದು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಭೇಟಿ ಮಾಡಿದರು. ಈ ವೇಳೆ ಪ್ರವಾಸೋದ್ಯಮ ಸಹಕಾರದ ಬಗ್ಗೆ ಚರ್ಚೆ ಮಾಡಿದರು. ಪ್ರವಾಸೋದ್ಯಮ ಕಾರ್ಯದರ್ಶಿ ಕೆ.ಎಸ್ ಶ್ರೀನಿವಾಸ್ ಅವರು ಈ ಬಗ್ಗೆ ಪ್ರಸ್ತುತಿ ಪಡಿಸಿದರು. ಪ್ರವಾಸೋದ್ಯಮ ಸಚಿವ ಪಿ. ಮೊಹಮದ್ ರಿಯಾಜ್, ಮುಖ್ಯ ಕಾರ್ಯದರ್ಶಿ ಡಾ.ವಿ.ಪಿ.ಜಾಯ್ ಮತ್ತಿತರರು ಉಪಸ್ಥಿತರಿದ್ದರು. ಹೇಮಂತ್ ಸೋರನ್ ಕುಟುಂಬಸ್ಥರು ಸಭೆಯಲ್ಲಿ ಭಾಗಿಯಾಗಿದ್ದರು. ಇನ್ನು ಸಿಎಂ ಹೇಮಂತ್ ಸೋರನ್ ಅವರಿಗೆ ಸಿಎಂ ಪಿಣರಾಯಿ ಅವರು 'ಅರನ್ಮುಲ ಕನ್ನಡಿ' ಉಡಗೊರೆಯಾಗಿ ನೀಡಿದರು.
Last Updated : Feb 3, 2023, 8:39 PM IST