ಮಂತ್ರಿಗಳ ಮನೆ ಮೇಲೆ ದಾಳಿ ನಡೆದರೆ ಕರ್ನಾಟಕದ ಅರ್ಧ ಸಾಲ ತೀರಿಸುವಷ್ಟು ಹಣ ಸಿಗುತ್ತದೆ: ಸಿ.ಎಂ. ಇಬ್ರಾಹಿಂ - etv bharat kannada
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/640-480-17902162-thumbnail-4x3-ck.jpg)
ಬೆಂಗಳೂರು : ಲೋಕಾಯುಕ್ತ ದಾಳಿಯಲ್ಲಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರ ನಿವಾಸದ ಮೇಲೆ ಲೋಕಾಯುಕ್ತ ದಾಳಿ ಕುರಿತು ಪ್ರತಿಕ್ರಿಯಿಸಿದ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಅವರು, ಇದು ಶಾಂಪಲ್, ಉಪ್ಪಿನಕಾಯಿ ಅಷ್ಟೆ. ಮಂತ್ರಿಗಳ ಮನೆ ಮೇಲೆ ದಾಳಿ ನಡೆದರೆ ಕರ್ನಾಟಕದ ಅರ್ಧ ಸಾಲ ತೀರಿಸುವಷ್ಟು ಹಣ ಸಿಗುತ್ತದೆ ಎಂದು ಟೀಕಿಸಿದ್ದಾರೆ. ಜೆಡಿಎಸ್ ರಾಜ್ಯ ಕಚೇರಿಯಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ಎರಡು ಗುಂಪುಗಳಿವೆ. ಒಂದು ಗುಂಪು ಇನ್ನೊಂದು ಗುಂಪಿನ ಮೇಲೆ ದಾಳಿ ಮಾಡಿಸುತ್ತಿದೆ. ಲೋಕಾಯುಕ್ತರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಮಂತ್ರಿಗಳ ಮನೆ ಮೇಲೂ ರೈಡ್ ಮಾಡಬೇಕು ಎಂದು ಆಹ್ರಹಿಸಿದರು.
ಕಾಂಗ್ರೆಸ್ ಹಾಗೂ ಬಿಜೆಪಿ ಒಂದೇ ಬೀದಿಯ ಮಹಾ ಪತಿವ್ರತೆಯರು. ರಾಜಕೀಯದ ವೇಶ್ಯಾವೃತ್ತಿ ಮಾಡಿಕೊಂಡು ಬಂದು ಇಂದು ಈ ಹಂತಕ್ಕೆ ಬಂದಿದ್ದಾರೆ. ಜೆಡಿಎಸ್ ಅಧಿಕಾರಕ್ಕೆ ಬಂದರೆ ಇವರು ತಿಂದಿದ್ದನ್ನು ಕಕ್ಕಿಸುತ್ತೇವೆ. ಬಿ.ಎಸ್. ಯಡಿಯೂರಪ್ಪನವರೇ, ಸಿ.ಟಿ.ರವಿ ಅವರೇ, ರೇಣುಕಾಚಾರ್ಯ, ನಳೀನ್ ಕುಮಾರ್ ಕಟೀಲ್ ಇದಕ್ಕೆ ಏನು ಹೇಳುತ್ತೀರಾ? ಎಂದು ಪ್ರಶ್ನಿಸಿದ ಇಬ್ರಾಹಿಂ, ಗುತ್ತಿಗೆದಾರರು ಮಾಡಿದ ಆರೋಪದ ಸತ್ಯಾಂಶ ಹೊರಬರುತ್ತಿದೆ ಎಂದರು.
ಇದನ್ನೂ ಓದಿ:ಮೋದಿ ಮ್ಯಾಜಿಕ್ ಈಶಾನ್ಯ, ಗುಜರಾತ್, ಯುಪಿ ಸೇರಿ ಕರ್ನಾಟಕದಲ್ಲೂ ಕೆಲಸ ಮಾಡುತ್ತಿದೆ: ಅಮಿತ್ ಶಾ