ಶಿರಾ ಪಟ್ಟಣದಲ್ಲಿ ಜೆಡಿಎಸ್ನ ಪಂಚರತ್ನ ರಥಯಾತ್ರೆ: ಕಾರ್ಯಕರ್ತರಿಂದ ಅದ್ದೂರಿ ಸ್ವಾಗತ - ಪಂಚರತ್ನ ರಥಯಾತ್ರೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-17125838-thumbnail-3x2-news.jpg)
ತುಮಕೂರು: ಜಿಲ್ಲೆಯಲ್ಲಿ ಕಳೆದ ಐದು ದಿನಗಳಿಂದ ಸಾಗುತ್ತಿರುವ ಜೆಡಿಎಸ್ನ ಪಂಚರತ್ನ ರಥಯಾತ್ರೆ ನಿನ್ನೆ ರಾತ್ರಿ ಮಧ್ಯ ರಾತ್ರಿವರೆಗೂ ಶಿರಾ ಪಟ್ಟಣದಲ್ಲಿ ಸಾಗಿತು. ಜೆಡಿಎಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಕುಮಾರಸ್ವಾಮಿ ಅವರನ್ನು ಅದ್ದೂರಿಯಾಗಿ ಸ್ವಾಗತಿಸಿದರು. ಶಿರಾ ತಾಲೂಕಿನ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಬೆಳೆಯುವ ಕಡಲೆಕಾಯಿ, ಅಡಕೆ ಹಾಗೂ ದಪ್ಪ ಮೆಣಸಿನಕಾಯಿ ಬಳಸಿ ವಿವಿಧ ನಮೂನೆಯ ಹಾರಗಳನ್ನು ಕುಮಾರಸ್ವಾಮಿ ಅವರಿಗೆ ಜೆಸಿಬಿ ಮೂಲಕ ಹಾಕಿ ಜೆಡಿಎಸ್ ಕಾರ್ಯಕರ್ತರು ಸಂಭ್ರಮಿಸಿದರು. ರಾತ್ರಿ ಸುಮಾರು 2 ಗಂಟೆಯವರೆಗೂ ಶಿರಾ ನಗರದಲ್ಲಿ ಜೆಡಿಎಸ್ ಪಂಚರತ್ನ ಯಾತ್ರೆ ಸಂಚರಿಸಿತು.
Last Updated : Feb 3, 2023, 8:34 PM IST