ಶಿವಮೊಗ್ಗ ಜಿಲ್ಲೆಗೆ ಪಂಚರತ್ನ ರಥಯಾತ್ರೆ ಆಗಮನ: ಗಮನ ಸೆಳೆದ ತರಹೇವಾರಿ ಹಾರಗಳು-ವಿಡಿಯೋ

🎬 Watch Now: Feature Video

thumbnail

ಶಿವಮೊಗ್ಗ: ಜೆಡಿಎಸ್ ಪಕ್ಷದ ಪಂಚರತ್ನ ರಥಯಾತ್ರೆ ಇಂದಿನಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಆರಂಭವಾಗಿದೆ. ಇಂದು ಭದ್ರಾವತಿ ಕ್ಷೇತ್ರದ ಕಾರೆಹಳ್ಳಿ ಮೂಲಕ ಯಾತ್ರೆ ಜಿಲ್ಲೆಯನ್ನು ಪ್ರವೇಶಿಸಿತು. ಹೆಚ್‌.ಡಿ.ಕುಮಾರಸ್ವಾಮಿ ಅವರಿಗೆ ಮಹಿಳೆಯರು ಪೂರ್ಣಕುಂಭ ಸ್ವಾಗತ ನೀಡಿದರು. 

ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶಾರದಾ ಅಪ್ಪಾಜಿಗೌಡ ಹಾಗೂ ಕಾರ್ಯಕರ್ತರು ಹೂವಿನ ಬೃಹತ್ ಹಾರ ಹಾಕುವ ಮೂಲಕ ಹೆಚ್‌ಡಿಕೆ ಅವರನ್ನು ಬರಮಾಡಿಕೊಂಡರು. ಮೊದಲು ಹೂವಿನ ಹಾರ, ಅಡಕೆ ತಟ್ಟೆ ಹಾರ, ಎಲೆ ಅಡಿಕೆ ಹಾರ, ಕಲ್ಲಂಗಡಿ ಹಾರ, ಬಿಸ್ಲರಿ ಹಾರ, ಕೆಂಪು ಗುಲಾಬಿ ಹಾರ.. ಹೀಗೆ ತರಹೇವಾರಿ ಹಾರಗಳು ಗಮನ ಸೆಳೆದವು. 

ರಥಯಾತ್ರೆ ಕೆಂಪೇಗೌಡ ನಗರ, ಬಾರಂದೂರು, ಕೆಂಚೆಮ್ಮನಹಳ್ಳಿ ,ಮಾವಿನಕೆರೆ, ತಾಸ್ಕೆಂಡ್ ನಗರ, ಮಾರುತಿ‌ನಗರ, ಗೌರಪುರ, ಅಂತರಗಂಗೆ ಸೇರಿದಂತೆ ಭದ್ರಾವತಿ ನಗರದಲ್ಲಿ ಸಾಗಿದೆ. ನಗರದ ಕನಕ ಮಂಟಪದಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ. ನಂತರ ಕುಮಾರಸ್ವಾಮಿ ಭದ್ರಾವತಿ ತಾಲೂಕು ನವಲೆ ಬಸಾಪೂರದಲ್ಲಿ ಗ್ರಾಮ ವಾಸ್ತವ್ಯ ನಡೆಸುವರು.

ಇದನ್ನೂಓದಿ:ಬಿಜೆಪಿ ತೊರೆದು ಹೋದವರ ಮೇಲೆ ಸಿ.ಟಿ.ರವಿ ವಾಗ್ದಾಳಿ

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.