ತೆನೆ ಇಳಿಸಿ ಕಾಂಗ್ರೆಸ್ ಸೇರ್ಪಡೆಯಾಗುವ ಒಲವು ತೋರಿದ ಜೆಡಿಎಸ್ ಮುಖಂಡ - JDS leader Jaware Gowda Press Meet
🎬 Watch Now: Feature Video
ಮಂಡ್ಯ: ಜಿಲ್ಲೆಯ ಜೆಡಿಎಸ್ ಮುಖಂಡ ಹಾಗೂ ನಾಗಮಂಗಲ ತಾಲೂಕಿನ ಜೆಡಿಎಸ್ ಮಾಜಿ ಅಧ್ಯಕ್ಷ ಜವರೇಗೌಡ ಅವರು ತೆನೆ ಇಳಿಸಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವ ಒಲವು ತೋರಿದ್ದಾರೆ. ಈ ಬಗ್ಗೆ ನಗರದಲ್ಲಿ ಇಂದು (ಶನಿವಾರ) ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಅವರು, ತಾವು ಕುಟುಂಬ ರಾಜಕಾರಣ ವಿರೋಧಿಸಿ ಕಾಂಗ್ರೆಸ್ಗೆ ಸೇರ್ಪಡೆಯಾಗುವುದಾಗಿ ಹೇಳಿದ್ದಾರೆ. ನಾವು ಈ ಹಿಂದೆ ವಂಶ ರಾಜಕಾರಣ ಅಂತ ಕಾಂಗ್ರೆಸ್ ಪಕ್ಷವನ್ನು ಅನ್ನು ವಿರೋಧಿಸುತ್ತಿದ್ದೆವು. ಆದರೆ, ಇದೀಗ ವಿಪರೀತ ಕುಟುಂಬ ರಾಜಕಾರಣ ಇರುವುದು ಜೆಡಿಎಸ್ ಪಕ್ಷದಲ್ಲಿದೆ ಅಂತ ಗೊತ್ತಾಗಿದೆ. ಜಾತಿ ಎತ್ತುಕಟ್ಟುವ ಸಂಘರ್ಷ ಕಾಂಗ್ರೆಸ್ ಪಕ್ಷದಲ್ಲಿಲ್ಲ. ಹಾಗಾಗಿ ನಾವು ಮಾಜಿ ಸಚಿವ ಚಲುವರಾಯಸ್ವಾಮಿಗೆ ಬೆಂಬಲ ನೀಡುವುದಾಗಿ ಹೇಳಿದರು. ಇದೇ ವೇಳೆ ಜೆಡಿಎಸ್ ವಿರುದ್ಧ ಕಟು ಹೇಳಿಕೆಗಳ ಮೂಲಕ ವಾಗ್ದಾಳಿ ನಡೆಸಿದ ಜವರೇಗೌಡ, ಈ ಪಕ್ಷದ ಬಗ್ಗೆ ಮಾತನಾಡುವುದಾದರೆ ಕೊನೆಯ ಮಾತು ಇರುವುದಿಲ್ಲ. ಹಾಗಾಗಿ ನಾನು ಸೇರಿದಂತೆ ಮುಂದಿನ ದಿನಗಳಲ್ಲಿ ಕೆಲವರು ಕೈ ಬಲಪಡಿಸುವ ನಿರ್ಧಾರ ಮಾಡಿರುವುದಾಗಿ ತಿಳಿಸಿದರು.
ಇದನ್ನೂ ಓದಿ: ಕರ್ನಾಟಕ ಬಿಜೆಪಿ ಚುನಾವಣಾ ಉಸ್ತುವಾರಿಯಾಗಿ ಧರ್ಮೇಂದ್ರ ಪ್ರಧಾನ್, ಸಹ ಉಸ್ತುವಾರಿಯಾಗಿ ಅಣ್ಣಾಮಲೈ ನೇಮಕ