ವಿರಾಜಪೇಟೆ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿ ಮನ್ಸೂರ್ ಅಲಿ ನಾಮಪತ್ರ ಸಲ್ಲಿಕೆ - etv bharat kannada
🎬 Watch Now: Feature Video

ಕೊಡಗು: ಜಿಲ್ಲೆಯಲ್ಲಿ ಚುನಾವಣಾ ಕಣ ರಂಗೇರಿದ್ದು, ಇಂದು ವಿರಾಜಪೇಟೆ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿ ಮನ್ಸೂರ್ ಅಲಿ ನಾಮಪತ್ರ ಸಲ್ಲಿಸಿದರು. ವಿರಾಜಪೇಟೆ ಗಡಿಯಾರ ಕಂಬದಿಂದ ತಾಲೂಕು ಕಚೇರಿವರೆಗೂ ಸಾವಿರಾರೂ ಕಾರ್ಯಕರ್ತರೊಂದಿಗೆ ಮೆರವಣೆಗೆ ಸಾಗಿ ಬಂದು ಚುನಾವಣಾಧಿಕಾರಿಗೆ ಉಮೇದುವಾರಿಕೆ ಸಲ್ಲಿಸಿದರು.
ಜೆಡಿಎಸ್ ಅಭ್ಯರ್ಥಿ ಮನ್ಸೂರ್ ಅಲಿ ಮಾತನಾಡಿ, ಕೊಡಗು ಜಿಲ್ಲೆಯಗೆ ಹೆಚ್.ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಜಿಲ್ಲೆಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. 2018 ರಲ್ಲಿ ಜಿಲ್ಲೆಯ ಹಲವು ಭಾಗದಲ್ಲಿ ಪ್ರವಾಹ ಉಂಟಾಗಿದ್ದರಿಂದ ಮನೆಗಳನ್ನು ಕಳೆದು ಕೊಂಡು ಬೀದಿಪಾಲಾಗಿದ್ದ ನಿರಾಶ್ರಿತರಿಗೆ 850ಕ್ಕೂ ಹೆಚ್ಚು ಮನೆಗಳನ್ನು ಕಟ್ಟಿಕೊಟ್ಟಿದ್ದರು. ನಿರಾಶ್ರಿತರು ಬಾಡಿಗೆ ಮನೆಯಲ್ಲಿ ವಾಸಮಾಡಲು ಬಾಡಿಗೆ ಹಣ, ಮನೆ ವಸ್ತುಗಳನ್ನು ಖರೀದಿಸಲು ಹಣ ಬಿಡುಗಡೆ ಕೂಡಾ ಮಾಡಿದ್ದರು ಎಂದರು.
ಕೊಡವ ಸಮಾಜಕ್ಕೆ ಆರ್ಥಿಕ ನೆರವು ಮತ್ತು ಹಾಕಿ ಮೈದಾನಕ್ಕೆ 10 ಕೋಟಿ ಬಿಡುಗಡೆ ಮಾಡಿದ್ದರು. ಅವರು ಮುಖ್ಯಮಂತ್ರಿಯಾಗಿದ್ದಾಗ ಕೊಡಗು ಜಿಲ್ಲೆಯಲ್ಲಿ ಹೊಸದಾಗಿ ಎರಡು ತಾಲೂಕುಗಳನ್ನು ಸೃಷ್ಟಿಸಿದ ಹೆಗ್ಗಳಿಕೆ ಜೆಡಿಎಸ್ ಪಕ್ಷಕ್ಕೆ ಸಲ್ಲುತ್ತದೆ. ಇಷ್ಟೆಲ್ಲ ಕೆಲಸಗಳನ್ನು ಜನರ ಮುಂದೆ ಇಟ್ಟು ಚುನಾವಣಾಗೆ ಹೋಗುತ್ತೇವೆ. ಈ ಬಾರಿ ಗೆಲವು ಸಾಧಿಸುತ್ತೇನೆ ಎಂದು ಮನ್ಸೂರ್ ಅಲಿ ವಿಶ್ವಾಸ ವ್ಯಕ್ತಪಡಿಸಿದರು.