ಜೈನ ಮುನಿ ಹತ್ಯೆ ಪ್ರಕರಣ: ಆರೋಪಿ ಮಾಳೆ ಮನೆಯ ದನಕರುಗಳಿಗೆ ಮೇವು ಹಾಕಿ ಮಾನವೀಯತೆ ಮೆರೆದ ಪೊಲೀಸರು - ಹಿರೆಕೋಡಿಯ ಕಾಮಕುಮಾರ ನಂದಿ ಮಹಾರಾಜ
🎬 Watch Now: Feature Video
ಚಿಕ್ಕೋಡಿ(ಬೆಳಗಾವಿ): ಜೈನ ಆಚಾರ್ಯ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಆರೋಪಿ ನಾರಾಯಣ ಮಾಳೆ ಮನೆಯಲ್ಲಿ ಸಾಕಿದ ದನಕರುಗಳಿಗೆ ಪೊಲೀಸರು ಮೇವು ಹಾಕಿ ಪೋಷಣೆ ಮಾಡಿ ತಮ್ಮ ಕರ್ತವ್ಯದ ಜೊತೆ ಜೊತೆಗೆ ಮಾನವೀಯ ಕಾರ್ಯ ಮೆರೆದಿದ್ದಾರೆ.
ಹಿರೆಕೋಡಿಯ ಕಾಮಕುಮಾರ ನಂದಿ ಮಹಾರಾಜ ಅವರನ್ನು ಹತ್ಯೆಗೈದ ನಾರಾಯಣ ಮಾಳೆ ಮನೆ ಈಗ ಖಾಲಿ ಖಾಲಿಯಾಗಿದೆ. ನಾರಾಯಣ ಮಾಳೆ ಬಂಧನವಾಗುತ್ತಿದ್ದಂತೆ ಆತನ ಕುಟುಂಬಸ್ಥರು ಹೆದರಿ ತಮ್ಮ ಸಂಬಂಧಿಕರ ಮನೆ ಸೇರಿದ್ದಾರೆ. ಕೊಲೆ ಆರೋಪದಲ್ಲಿ ನಾರಾಯಣ ಮಾಳೆ ಜೈಲು ಸೇರಿದರೆ, ಆತನ ಕುಟುಂಬಸ್ಥರು ಶೆಡ್ನಲ್ಲಿರುವ ಎರಡು ಆಕಳು ಹಾಗೂ ಎರಡು ಎಮ್ಮೆ ಮತ್ತು 40 ಕ್ಕೂ ಹೆಚ್ಚು ಮೇಕೆಗಳನ್ನು ಶೆಡ್ನಲ್ಲಿಯೇ ಬಿಟ್ಟು ಮನೆ ತೊರೆದಿದ್ದಾರೆ.
ಮಾಳೆ ಮನೆಗೆ ಭದ್ರತೆಗೆ ಎಂದು ಜುಲೈ 7 ರಂದು ನಿಯೋಜನೆಗೊಂಡಿದ್ದ ಕೆಎಸ್ಆರ್ಪಿ ಪೊಲೀಸರು ಹಾಗೂ ಚಿಕ್ಕೋಡಿ ಪೊಲೀಸರು ಕಳೆದ ನಾಲ್ಕು ದಿನಗಳಿಂದ ಆರೋಪಿ ಮಾಳೆ ಸಾಕಿದ್ದ ಮೇಕೆ ಹಾಗೂ ಹಸು ಎಮ್ಮೆಗಳಿಗೆ ತಾವೇ ಮೇವು ಹಾಕಿ ನಿರು ಕುಡಿಸುತ್ತಿದ್ದಾರೆ. ಮಾಳೆ ಆರೋಪಿಯಾದರೂ ಸಹ ಆತ ತನ್ನ ಮನೆಯಲ್ಲಿ ಕಟ್ಟಿದ್ದ ಮೂಕ ಪ್ರಾಣಿಗಳ ರೋಧನೆ ನೋಡಲಾಗದೆ ಪೊಲೀಸರೇ ಅವುಗಳ ಲಾಲನೆ ಪಾಲನೆ ಮಾಡುತ್ತಿದ್ದಾರೆ. ಪೊಲೀಸರ ಈ ಮಾನವೀಯ ಕೆಲಸಕ್ಕೆ ಈಗ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಇದನ್ನೂ ನೋಡಿ: ಜೈನ ಮುನಿಗಳ ಹತ್ಯೆ ಕೇಸ್: ಇಬ್ಬರು ಆರೋಪಿಗಳನ್ನ 7 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದ ಕೋರ್ಟ್