Video: ಉಪರಾಷ್ಟ್ರಪತಿ ಧನಕರ್ ಸೇರಿ ಗಣ್ಯರಿಂದ ಯೋಗ ದಿನ ಆಚರಣೆ.. - ದೇವೇಂದ್ರ ಫಡ್ನವಿಸ್ ಯೋಗ
🎬 Watch Now: Feature Video
ಮಧ್ಯಪ್ರದೇಶ/ಮಹಾರಾಷ್ಟ್ರ : 9ನೇ ಅಂತಾರಾಷ್ಟ್ರೀಯ ಯೋಗದಿನದ ಅಂಗವಾಗಿ ಉಪರಾಷ್ಟ್ರಪತಿ ಜಗದೀಪ್ ಧನಕರ್ ಮತ್ತು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಜಬಲ್ಪುರದಲ್ಲಿ ಯೋಗ ಪ್ರದರ್ಶನ ಮಾಡಿದರು. ಹಾಗೆಯೇ, ಮುಂಬೈನಲ್ಲಿ ಸಿಎಂ ಏಕನಾಥ್ ಶಿಂಧೆ ಮತ್ತು ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಯೋಗ ಮಾಡಿದರು. ಇನ್ನು ದೆಹಲಿಯಲ್ಲಿ ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಸಹ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡು ಯೋಗಾಸನ ಮಾಡಿದರು.
9ನೇ ವಿಶ್ವ ಯೋಗ ದಿನದ ಅಂಗವಾಗಿ ಇಂದು ಮುಂಜಾನೆಯಿಂದ ದೇಶಾದ್ಯಂತ ಯೋಗಾಭ್ಯಾಸ ಕಾರ್ಯಕ್ರಮ ಹಾಗೂ ಯೋಗ ಶಿಬಿರಗಳು ನಡೆಯುತ್ತಿವೆ. ಜಿಲ್ಲಾ ಮಟ್ಟದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾ ಆಯುಷ್ ಇಲಾಖೆ ವತಿಯಿಂದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಹಾಗೆಯೇ, ಮಳೆಯಿಂದಾಗಿ ಕೆಲ ಜಿಲ್ಲೆಗಳಲ್ಲಿ ಒಳಾಂಗಣಗಳಲ್ಲಿ ಯೋಗ ದಿನದ ಆಚರಣೆಗಳು ನಡೆದವು. ಯೋಗ ಭಾರತೀಯ ಸಂತರ ಅಮೂಲ್ಯ ಕೊಡುಗೆಯಾಗಿದ್ದು, ಜನರ ಯೋಗಕ್ಷೇಮಕ್ಕಾಗಿ ಜಗತ್ತಿಗೆ ಪ್ರಸ್ತುತಪಡಿಸಲಾಗಿದೆ.
ಇದನ್ನೂ ಓದಿ : ವಿಶ್ವಸಂಸ್ಥೆಯಲ್ಲಿ ಇಂದು ಮೋದಿ ಯೋಗ ಪ್ರದರ್ಶನ.. ದೇಶಾದ್ಯಂತ ಯೋಗ ದಿನದ ಸಂಭ್ರಮ
ಈ ಬಾಲಕ ಜ್ಯೂನಿಯರ್ ರಾಮದೇವ ಬಾಬಾ.. ವಯಸ್ಸು ಕೇವಲ 10 .. 150ಕ್ಕೂ ಹೆಚ್ಚು ಆಸನಗಳು ಈತನಿಗೆ ಸುಲಲಿತ