ಶರದ್​ ಪವಾರ್​ ಆಪ್ತ ಉದ್ಯಮಿ ಅನಿರುದ್​ ದೇಶಪಾಂಡೆ ಕಚೇರಿ ಮೇಲೆ ಐಟಿ ದಾಳಿ.. - ಶರದ್​​ ಪವಾರ್​ ಅವರ ಆಪ್ತ

🎬 Watch Now: Feature Video

thumbnail

By

Published : Feb 15, 2023, 8:19 PM IST

Updated : Feb 15, 2023, 8:58 PM IST

ಪುಣೆ (ಮಹಾರಾಷ್ಟ್ರ) : ರಾಷ್ಟ್ರೀಯವಾದಿ ಕಾಂಗ್ರೆಸ್​ ಪಕ್ಷದ ಅಧ್ಯಕ್ಷ ಶರದ್​ ಪವಾರ್​ ಅವರ ಆಪ್ತ ಹಾಗೂ ಖ್ಯಾತ ಉದ್ಯಮಿಯಾಗಿರುವ ಅನಿರುದ್ಧ​​ ದೇಶಪಾಂಡೆ ಅವರ ನಿವಾಸ ಮತ್ತು ಕಚೇರಿಗಳ ಮೇಲೆ ಇಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸಿಟಿಗ್ರೂಪನ್​ ವ್ಯವಸ್ಥಾಪಕ ನಿರ್ದೇಶಕ ಹಾಗೂ ಅಮನೋರಾ ಟೌನ್‌ಶಿಪ್‌ನ ಪ್ರವರ್ತಕರಾಗಿರುವ ಅನಿರುದ್ಧ ಅವರಿಗೆ ಸೇರಿದ ಕಚೇರಿಗಳ ಮೇಲೆ ಐಟಿ ಅಧಿಕಾರಿಗಳಿಂದ ದಾಳಿ ನಡೆಸಲಾಗಿದೆ. 

ಪ್ರಾಥಮಿಕ ಮಾಹಿತಿ ಪ್ರಕಾರ ಇಂದು ಸುಮಾರು 14 ವಾಹನಗಳಲ್ಲಿ ಬಂದ ಐಟಿ ಅಧಿಕಾರಿಗಳು ಒಟ್ಟು 8 ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ. ಅದರಲ್ಲಿ ಶರದ್​​ ಪವಾರ್​ ಅವರ ಆಪ್ತರಾಗಿರುವ ಅನಿರುದ್ಧ ಅವರ ಕಚೇರಿಯು ಒಳಗೊಂಡಿದೆ ಎಂದು ತಿಳಿದು ಬಂದಿದೆ. ಕಂಪನಿಯ ಹಣಕಾಸು ವ್ಯವಹಾರ ಮತ್ತು ತೆರಿಗೆ ವಂಚನೆ ಕುರಿತು ಐಟಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಇನ್ನು ಅನಿರುದ್ಧ ರಾಜಕೀಯ ನಾಯಕರೊಂದಿಗೂ ಗುರುತಿಸಿಕೊಂಡಿದ್ದಾರೆ. ಈ ದಾಳಿ ಪುಣೆಯ ಉದ್ಯಮ ಕ್ಷೇತ್ರದಲ್ಲಿ ಬಾರಿ ಸಂಚಲನ ಸೃಷ್ಟಿಸಿದೆ. 

ಇದನ್ನೂ ಓದಿ: ದೆಹಲಿ, ಮುಂಬೈ ಕಚೇರಿಗಳ ಮೇಲೆ ಐಟಿ ದಾಳಿ: ಸಂಪೂರ್ಣವಾಗಿ ಸಹಕರಿಸುತ್ತಿದ್ದೇವೆ ಎಂದ ಬಿಬಿಸಿ

Last Updated : Feb 15, 2023, 8:58 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.